ಕಾರ್ತೀಕ ಮಾಸ ಬಂದಿತೆಂದರೆ ತುಳಸಿ ಮದುವೆಯ ಸಂಭ್ರಮ, ತುಳಸಿ ಮದುವೆಯ ದಿನವನ್ನು ಕಾರ್ತೀಕ ಮಾಸದ ಶುದ್ಧ ದ್ವಾದಶಿಯಂದು ಮಾಡಲಾಗುತ್ತದೆ. ಆ ದಿವಸವನ್ನು ಉತ್ಥಾನ ದ್ವಾದಶಿ ಎಂದು ಕರೆಯಲಾಗುತ್ತದೆ.
ತುಳಸಿ ಮದುವೆ, ಬೃಂದೆ ಎಂಬುದು ತುಳಸಿಯ ಮೂಲ ಹೆಸರು ರಾಕ್ಷಸ ರಾಜ ಜಲಂಧರನ ರಾಣಿಯಾಗಿದ್ದ ವೃಂದೆಯು ಮಹಾನ್ ಪತಿವ್ರತೆ ಹಾಗೂ ವಿಷ್ಣು ಭಕ್ತಳು ಅವಳ ಪಾತಿವ್ರತ್ಯದ ಬಲದಿಂದ ಜಲಂಧರ ರಾಕ್ಷಸನು ದೇವತೆಗಳು ಮತ್ತು ಮಾನವರಿಗೆ ಉಪದ್ರವವನ್ನು ಕೊಡುತ್ತಾ ತನ್ನ ಸಾಮ್ರಾಜ್ಯವನ್ನು ನಡೆಸಿರುತ್ತಾನೆ. ಆಗ ಅವನ ಉಪಟಳದಿಂದ ಬೇಸತ್ತ ದೇವತೆಗಳು ಶ್ರೀಮನ್ನಾರಾಯಣನ ಬಳಿಗೆ ಹೋಗಿ ಕಾಪಾಡುವಂತೆ ಬೇಡಿ ಕೊಳ್ಳುತ್ತಾರೆ. ಜೊತೆಗೆ ವೃಂದೆಯ ಪಾತಿವ್ರತ್ಯದ ಬಲದಿಂದ ರಾಕ್ಷಸನಿಗೆ ಶಕ್ತಿ ಬಂದಿರುವುದನ್ನು ಮತ್ತು ಅವಳು ಪರಮ ಹರಿ ಭಕ್ತಳು ಎಂಬುದನ್ನು ತಿಳಿಸುತ್ತಾರೆ. ಶ್ರೀಮನ್ನಾರಾಯಣನು ಜಲಂಧರನ ಅರಮನೆಗೆ ಹೋಗಿ ಅವನ ವೇಷದಲ್ಲಿ ವೃಂದೆಯ ಬಳಿಗೆ ಹೋಗುತ್ತಾನೆ. ಅವಳಿಗೆ ಅನುಮಾನ ಬಂದರೂ ಮಾಯೆಯಿಂದ ಸುಮ್ಮನಿರುತ್ತಾಳೆ ನಂತರ ಅವಳ ಪಾತಿವ್ರತ್ಯದ ಬಲ ಕಡಿಮೆಯಾದಂತೆ ಜಲಂಧರನ ವಧೆಯಾಗುತ್ತದೆ. ವೃಂದೆಯ ಭಕ್ತಿ ಮತ್ತು ತ್ಯಾಗಕ್ಕಾಗಿ ಭಗವಂತನು ಅವಳನ್ನು ಸ್ವೀಕರಿಸುವ ಮತ್ತು ಅವನಿಗೆ ಅರ್ಪಿತವಾಗುವ ಎಲ್ಲ ಪದಾರ್ಥಗಳಲ್ಲೂ ತುಳಸಿ ಇರಲೇ ಬೇಕೆಂಬ ವರವನ್ನು ನೀಡುತ್ತಾನೆ. ಅದೇ ವೃಂದೆ ತುಳಸಿಯಾಗಿ ಗಿಡವಾಗಿ ನಿಲ್ಲುತ್ತಾಳೇ, ತನ್ನ ಆರಾಧ್ಯ ಶ್ರೀಹರಿಯನ್ನು ವರಿಸುವಂತೆ ಬೇಡಿಕೊಳ್ಳುತ್ತಾಳೇ. ತುಳಸಿ ಇಲ್ಲದ ಯಾವುದೇ ಪದಾರ್ಥವನ್ನು ಶ್ರೀಹರಿಯು ಸ್ವೀಕರಿಸುವುದಿಲ್ಲ. ಅದೇ ಅವಳು ತನ್ನ ಆರಾಧ್ಯವನ್ನು ಬೇಡಿಕೊಂಡಿದ್ದು. ಕಾರ್ತೀಕ ಮಾಸದ ಶುದ್ಧ ದ್ವಾದಶಿಯಂದು ಶ್ರೀ ಮತ್ತು ತುಳಸಿಯ ವಿವಾಹ ಮಹೋತ್ಸವವು ನೆರವೇರುತ್ತದೆ. ಆಷಾಢ ಮಾಸದ ಏಕಾದಶಿಯಂದು ಆರಂಭವಾಗುವ ಚಾತುರ್ಮಾಸವು ಉತ್ಥಾನ ದ್ವಾದಶಿಯಂದು ಮುಗಿಯುತ್ತದೆ. ಯೋಗ ನಿದ್ರೆಗೆ ಜಾರಿದ ಭಗವಂತನು ಮಗ್ಗಲು ಬದಲಿಸುವ ಎಂಬ ಮಾತನ್ನು ಹೇಳುತ್ತಾರ. ಭಗವಂತ ಏಳುವುದರಿಂದ ಉತ್ಥಾನ ದ್ವಾದಶಿ ಎಂದು ಹೇಳುತ್ತಾರೆ. ಅಂದು ದಾಮೋದರ ಮತ್ತು ತುಲಸಿಯ ವಿವಾಹವನ್ನು ನೆರವೇರಿಸುತ್ತಾರೆ. ತುಲಸಿ ವಿವಾಹವನ್ನು ದ್ವಾದಶಿಯ ಸಂಜೆಯಲ್ಲಿ ಮಾಡುತ್ತಾರೆ.
ತುಳಸಿ ವಿವಾಹ ಪದ್ಧತಿ: ಮನೆಯಲ್ಲಿಯ ತುಳಸಿಯ ಬೃಂದಾವನವನ್ನು ಮದುಮಗಳಂತೆ ಶೃಂಗಾರ ಮಾಡುತ್ತಾರೆ. ಎದುರಿಗೆ ಕೃಷ್ಣನ ಮೂರ್ತಿ ಅಥವಾ ಬೆಳ್ಳಿಯ ಕೃಷ್ಣನನ್ನು ಬೆಳ್ಳಿ ಬಟ್ಟಲಲ್ಲಿ ಇರಿಸಿ. ಶಾಸ್ತೊ÷್ತçÃಕ್ತವಾಗಿ ಮದುವೆಯ ಮಂತ್ರಗಳನ್ನು ಹೇಳಿ ಅಕ್ಷತೆಯನ್ನು ಹಾಕಿ ವಿವಾಹ ನೆರವೇರಿಸುತ್ತಾರೆ. ನೆಲ್ಲಿಕಾಯಿಯ ಮೇಲೆ ದೀಪದ ಆರತಿ ಮಾಡುತ್ತಾರೆ. ತುಳಸಿ ವಿವಾಹವನ್ನು ಸಂಜೆಯ ಹೊತ್ತಿನಲ್ಲಿ ಅಂದರೆ ಗೋಧೂಳಿ ಮಹೂರ್ತದಲ್ಲಿ ಮಾಡುವುದು ವಿಶೇಷ. ಸಂಜೆ ಮನೆಯಲ್ಲಿ ತುಳಸಿ ಬೃಂದಾವನದೊAದಿಗೆ ನೆಲ್ಲಿ ಗಿಡವನ್ನು ಶ್ರೀ ಕೃಷ್ಣ ನ ಸನ್ನಿಧಾನವೆನಿಸುವ ಸಾಲಿಗ್ರಾಮ ಅಥವಾ ಕೃಷ್ಣನ ಪ್ರತಿ ರೂಪಗಳೊಂದಿಗೆ ಇಟ್ಟು ಪೂಜೆ ಮಾಡಿ ನಿಜವಾದ ಮದುವೆಯ ರೀತಿ ಸಂಭ್ರಮಿಸುವುದು ವಿಶೇಷವಾಗಿದೆ.
ತುಳಸಿಯ ವೈಜ್ಞಾನಿಕ ಮಹತ್ವ: ಚಾತುರ್ಮಾಸದ ಸಮಾಪ್ತಿಯದಿನ ಬರುವ ತುಳಸಿ ವಿವಾಹ ಪೂಜಿಸಲ್ಪಡುವ ತುಳಸಿ ಕೇವಲ ಧಾರ್ಮಿಕ ಮಹತ್ವನ್ನು ಪಡೆದಿರದೇ ವೈಜ್ಞಾನಿಕವಾಗಿ ಔಷಧೀಯ ಗುಣಗಳನ್ನು ಹೊಂದಿ ಬಹು ಮಹತ್ವದ್ದಾಗಿವೆ. ತುಳಸಿ ಗಿಡದಿಂದ ಬಹಳಷ್ಟು ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆಯಾಗಿ ತುಳಸಿ ಗಿಡದ ಆಸು ಪಾಸಿನಲ್ಲಿ ಹೇರಳವಾಗಿ ಶುದ್ಧ ಗಾಳಿಯು ದೊರೆಯುತ್ತದೆ, ಮನೆಯ ಸುತ್ತಮುತ್ತಲು ಕೀಟಗಳು ಬ್ಯಾಕ್ಟೀರಿಯಾಗಳು ಬರದಂತೆ ತುಳಸಿ ತಡೆಯುತ್ತದೆ. ಹೀಗಾಗಿ ಮನೆಯ ಮುಂದೆ ಹಾಗೂ ಸುತ್ತ ಮುತ್ತ ತುಳಸಿ ಬೆಳೆಸಿ, ತುಳಸಿ ವೃಂದಾವನ ಮತ್ತು ಸುತ್ತಮುತ್ತಲೂ ದೇವರ ಪೂಜೆಗೆ ತುಳಿಸಿಯನ್ನು ಬಳಸುವ ಪದ್ಧತಿ ಹಿಂದೂಗಳಲ್ಲಿ ಇದೆ. ಅಸ್ತಮಾ ಕಾಯಿಲೆಯ ಚಿಕಿತ್ಸೆಗೆ ತುಳಸಿಯನ್ನು ಬಳಸಲಾಗುತ್ತದೆ. ಜ್ವರ ಬಂದಾಗ ಕುಡಿಯುವ ಕಷಾಯದಲ್ಲಿ ತುಳಸಿ ಬಳಸಿದರೆ ಜ್ವರ ಬೇಗ ಕಡಿಮೆಯಾಗುತ್ತದೆ., ದಿನ ನಿತ್ಯ ತುಳಸಿ ಬಳಕೆಯಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಕಡಿಮೆಯಿರುತ್ತದೆ. ಮೂತ್ರಪಿಂಡದ ಸೋಂಕನ್ನು ಅದರಲ್ಲಿ ಆದ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ. ದೇಹದ ಒಳಬಾಗಗಳ ರಕ್ಷಣೆ ಮಾಡುತ್ತದೆ. ಬಾಯಿಯ ಆರೋಗ್ಯವನ್ನು ಕಾಪಡುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕೂದಲ ಸಂರಕ್ಷಣೆಯನ್ನು ಮಾಡುತ್ತದೆ, ನಮಗೆ ಆಗಾಗ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ ಅದಕ್ಕೆ ಆಯುರ್ವೇದದ ಔಷಧಿಗಳಲ್ಲಿ ಮಧುಮೇಹದ ಚಿಕಿತ್ಸೆಗೆ ತುಳಸಿ ನೆಲ್ಲಿಪುಡಿ ಹಾಗೂ ಅರಿಶಿನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೃದಯದ ಆರೋಗ್ಯವನ್ನು ಸದೃಢಗೊಳಿಸುತ್ತದೆ, ನಮ್ಮ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಯಾವುದೇ ರೀತಿ ಸೋಂಕನ್ನು ಕೂಡ ತಡೆಯುತ್ತದೆ, ಎಲ್ಲಕ್ಕೂ ಹೆಚ್ಚಾಗಿ ನೆಗಡಿ ಕೆಮ್ಮಿನ ಸಂದರ್ಭದಲ್ಲಿ ಕಫವನ್ನು ಕರಗಿಸಲು ಬಹಳಷ್ಟು ಸಹಕಾರಿಯಾಗಿದೆ. ರೋಗಕಾರಕ ಕೀಟಾಣು ಅಥವಾ ಪದಾರ್ಥಗಳೊಂದಿಗೆ ಹೋರಾಡುತ್ತದೆ. ಬಾಯಿಯಿಂದ ಬರುವ ದುರ್ವಾಸನೆಯನ್ನು ತಡೆಗಟ್ಟುತ್ತದೆ. ಹಲ್ಲುಗಳಲ್ಲಿ ಉಂಟಾಗಬಹುದಾದ ಹುಳುಕು ಅಥವಾ ಸೋಂಕನ್ನು ಕೂಡ ತಡೆಗಟ್ಟುತ್ತದೆ. ತುಳಸಿಯು ದೇಹದಲ್ಲಿ ಅನವಶ್ಯಕವಾಗಿ ಬಂದ ರಸಾಯನಿಕಗಳು ಕೀಟನಾಶಕಗಳು ಮೊದಲಾದ ಪದಾರ್ಥಗಳೊಂದಿಗೆ ಹೋರಾಡಿ ಜೀವಕೋಶಗಳಿಗೆ ಮತ್ತು ದೇಹದ ಇತರೇ ಅಂಗಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ದೇಹದಲ್ಲಿ ಅನವಶ್ಯಕವಾಗಿ ಬಂದ ಪದಾರ್ಥಗಳನ್ನು ಹೊರಹಾಕುತ್ತದೆ. ಚರ್ಮ ರೋಗಗಳು ಉಂಟಾದರೆ ತುರಿಕೆ , ಕಜ್ಜಿ ಹುಳಕಡ್ಡಿ ಅಥವಾ ಬೇರೆ ಕಲೆಗಳು ಉಂಟಾದಾಗಲೂ ಕೂಡ ತುಳಸಿ ರಸ ಅಥವಾ ತುಳಸಿ ರಸದೊಂದಿಗೆ ಬೇರೆ ಯಾವುದೇ ಪದಾರ್ಥವನ್ನು ಸೇರಿಸಿ ತೊಂದರೆಯಾದ ಸ್ಥಳದಲ್ಲಿ ಲೇಪಿಸಿದಾಗ ಸೋಂಕು ಕಡಿಮೆಯಾಗಿ ಚರ್ಮವು ಆರೋಗ್ಯ ಯುತವಾಗಿಯೂ ಕಾಂತಿಯುತವಾಗಿಯೂ ಆಗುತ್ತದೆ. ತುಳಸಿಯ ಇನ್ನೊಂದು ಬಹು ಮುಖ್ಯ ಪ್ರಯೋಜನವೆಂದರೆ ಬೇಗ ಮುಪುö್ಪ ಬರುವುದನ್ನು ಬಾಲ ನರೆಯನ್ನು ತಡೆಯುತ್ತದೆ. ಇಂತಹ ಉಪಯೋಗಕಾರಿ ತುಳಸಿ ಧಾರ್ಮಿಕ ಹಾಗೂ ವೈಜ್ಞಾನಿಕ ಉಪಯುಕ್ತತೆಯೊಂದಿಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
-ಮಾಧುರಿ ದೇಶಪಾಂಡೆ, ಬೆಂಗಳೂರು
ಉತ್ಥಾನ ದ್ವಾದಶಿ
