ಬೆಂಗಳೂರು: ಇತ್ತೀಚೆಗೆ ನಮ್ಮನ್ನಗಲಿದ ಸುಪ್ರಸಿದ್ಧ ನಿರೂಪಕಿ ಅಪರ್ಣಾ ವಸ್ತಾರೆಯವರ ಭಾವಚಿತ್ರವನ್ನು ಉದಯಭಾನು ಕಲಾ ಸಂಘದ ಸಭಾಂಗಣದಲ್ಲಿನ ಸಾಧಕರ ಭಾವಚಿತ್ರಗಳ ನಡುವೆ ಸ್ಥಾಪಿಸಲಾಯಿತು.
ಸಂಸದರೂ, ಜಯದೇವ ಹೃದ್ರೋಗ ಸಂಸ್ಥೆಯ ವಿಶ್ರಾಂತ ನಿರ್ದೇಶಕರೂ ಆದ ಡಾ ಸಿ ಎನ್ ಮಂಜುನಾಥ್ ಈ ಭಾವಚಿತ್ರವನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ನೊಬಲ್ ಹಾಟ್ರ್ಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸತ್ಯಪ್ರಸಾದ್, ರಾ ಸು ವೆಂಕಟೇಶ ಅವರು ಉದಯಭಾನು ಕಲಾಸಂಘಕ್ಕೆ ನೀಡಿದ 275000/- ರೂಗಳ ದೇಣಿಗೆಯ ಚೆಕ್ ನ್ನು ಶ್ರೀಶ್ರೀರಾಮೇಗೌಡರು ಸ್ವೀಕರಿಸಿ ಧನ್ಯವಾದ ಅರ್ಪಿಸಿದರು.
ಮ್ಯಾಂಡೋಲಿನ್ ಕಾರ್ತಿಕ್ ಮತ್ತು ತಂಡದವರಿಂದ “ಗಾನವೈವಿಧ್ಯ” ಹಾಡುಗಳ ಕಾರ್ಯಕ್ರಮವಿತ್ತು.ಪಂಡಿತ್ ಪ್ರವೀಣ್ ಗೋಡ್ಖಿಂಡಿಯವರು ಅತಿಥಿಯಾಗಿ ಆಗಮಿಸಿದ್ದರು.