ಬೆಂಗಳೂರು: ಉದಯೋನ್ಮುಖ ಭರತ ನಾಟ್ಯ ಕಲಾವಿದೆ ಕುಮಾರಿ ಪ್ರಣತಿ ಕಟ್ಟೆ ಅವರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಚೌಡಯ್ಯ ಸ್ಮಾರಕ ಭವನದಲ್ಲಿ ಸುಮಾ ಕೃಷ್ಣಮೂರ್ತಿ ಅವರ ಗರಡಿಯಲ್ಲಿ ಹಲವಾರು ವರ್ಷಗಳ ಕಾಲ ಮೈಸೂರು ಬನ್ನಿಯಲ್ಲಿ ಭರತ ನಾಟ್ಯ ಅಭ್ಯಾಸ ನಡೆಸಿರುವ ಪ್ರಣತಿ ಕಟ್ಟೆ ವಿವಿಧ ರಾಗ ತಾಳಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರು ಮಂತ್ರ ಮುಗ್ದರಾಗಿಸುವ ರೀತಿ ಭರತ ನಾಟ್ಯ ನೃತ್ಯ ಪ್ರದರ್ಶನ ನಡೆಸಿ ಮನಸೂರೆಗೊಂಡರು.
ಈ ಭರತನಾಟ್ಯ ಪ್ರದರ್ಶನದಲ್ಲಿ ಅಪರೂಪದ ಕೃತಿಗಳನ್ನು ಆಯ್ದ ಸುಮಾ ಕೃಷ್ಣಮೂರ್ತಿ ಅವರು ಮೈಸೂರು ಶೈಲಿಯ ಪತಾಕೆಯನ್ನು ಉನ್ನತ ಮಟಕ್ಕೆ ಏರಿಸಿದರೆಂದರೆಂಬುದು ಗಮನ ಸೆಳೆಯುವಂತೆ ಇತ್ತು.ಈ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಭರತ ನಾಟ್ಯ ಖ್ಯಾತ ಕಲಾವಿದೆ , ಸುಮಾ ಕೃಷ್ಣಮೂರ್ತಿ ಅವರ ನೃತ್ಯ ಗುರು ನೃಪುರ ನೃತ್ಯ ಶಾಲೆಯ ನಿರ್ದೇಶಕಿ ಡಾ.ಲಲಿತಾ ಶ್ರೀನಿವಾಸನ್, ಸಂಗೀತಗಾರ್ತಿ ಡಾ.ಟಿ.ಎಸ್.ಸತ್ಯವತಿ,ಅಮೆರಿಕದ ಟೆಕ್ಸಾಸ್ ನ ಆಸ್ಟಿನ್ ನ ನಾಟ್ಯಾಲಯ ಶಾಲೆಯ ನಿರ್ದೇಶಕಿ ವಿನಿತಾ ಸುಬ್ರಹ್ಮಣ್ಯಿಯನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಕ್ಷಿಯಾದರು.ಪ್ರಣತಿ ಕಟ್ಟೆ ಪ್ರತಿಭಾನ್ವಿತ ಕಲಾವಿದೆಯಾಗಿದ್ದು ಉನ್ನತ ಅಭ್ಯಾಸದ ಜತೆಗೆ ವಿವಿಧ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭರತ ನಾಟ್ಯ ಪ್ರದರ್ಶನ ನಡೆಸಿ ಸೈ ಎನಿಸಿಕೊಂಡಿದ್ದಾರೆ.