ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ಮತ್ತು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ಘಟಕಗಳ ವತಿಯಿಂದ ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್, ಉದಯ ಪದವಿ ಪೂರ್ವ ಕಾಲೇಜು, ವಿಜಯನಗರ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ :21-11-2024ರ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಉದಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ, ಜಾನಪದ ಕಾರ್ತಿಕ ಸಂಭ್ರಮ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರು ಐ.ಸಿ.ಸಿ.ಆರ್ ಭಾರತ ಸರ್ಕಾರದ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ರವರು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ರಮಣಶ್ರೀ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ನಾಡೋಜ ಎಸ್. ಷಡಕ್ಷರಿ ರವರು ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷರಾದ ಪಾಲನೇತ್ರ ರವರು ಕಜಾಪ ಕೇಂದ್ರ ಜಿಲ್ಲಾಧ್ಯಕ್ಷರಾದ ಡಾ. ರಿಯಾಜ್ ಪಾಷ ರವರು ಬಿಬಿಎಂಪಿ ಪೂರ್ವ ವಲಯ ಉಪ ಆಯುಕ್ತರಾದ ಜೆ ರಾಜು ರವರು, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ರಘುನಾಥ್ ಗೋವಿಂದರಾಜನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ಕುಮಾರ್ ಶೆಟ್ಟಿ, ಉದಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಗಿರೀಶ, ಸಿನಿಮಾ ನಿರ್ದೇಶಕರು ಹಾಗೂ ನಾಟಕ ಅಕಾಡಮಿ ಸದಸ್ಯರಾದ ರವೀಂದ್ರನಾಥ್ ಸಿರಿವರ, ಚೈತ್ರ ಸಂದೇಶ್ ಎಜುಕೇಷನಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಸಂದೇಶ್ ಮತ್ತಿತರರು ಉಪಸ್ಥಿತರಿಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ 2024-25ರ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಶ್ರೀ ಅನಂತ ಭಾಗ್ವತ್,- ಸಂಗೀತ ಕ್ಷೇತ್ರ, ಶ್ರೀ ರವಿದಾಸ್ ಬಿಂಡಿಗನವಿಲೆ – ಮಾಧ್ಯಮ ಕ್ಷೇತ್ರ, ಇಂದುಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ. ಪದ್ಮನಾಗರಾಜು, ಮಾಧ್ಯಮ ಕ್ಷೇತ್ರ, ಶ್ರೀಮತಿ ನೇತ್ರಾವತಿ ಮಂಜುನಾಥ್ – ನೃತ್ಯ ಕ್ಷೇತ್ರ ಶ್ರೀ ಹೆಚ್.ಕೆ. ಪಾಪಣ್ಣ- ಜಾನಪದ ಕ್ಷೇತ್ರ, ಶ್ರೀಮತಿ ನಾಗವೇಣಿ ಮುತ್ತವ್ವನವರ – ಶಿಕ್ಷಣ ಕ್ಷೇತ್ರ, ಶ್ರೀ ವೆಂಕಟರಾಜು-ಸಂಗೀತ ಕ್ಷೇತ್ರ, ಶ್ರೀ ಕುವರ ಯಲ್ಲಪ್ಪ-ಸಾಹಿತ್ಯ ಕ್ಷೇತ್ರ, ಡಾ|| ನೈಲಾ – ವೈದ್ಯಕೀಯ ಕ್ಷೇತ್ರ, ಶ್ರೀಮತಿ ಸಂಗೀತ ಆರ್. – ಯೋಗ ಶಿಕ್ಷಣ ಕ್ಷೇತ್ರ, ಶ್ರೀ ಅಂಜನಪ್ಪ ಹೆಚ್. – ಜಾನಪದ ಕ್ಷೇತ್ರ, ವೇಣುಗೋಪಾಲ್ ಪರಿಸರ – ಪರಿಸರ ಕ್ಷೇತ್ರದಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.ನಾಡಿನ ಹೆಸರಾಂತ, ಅಂತರರಾಷ್ಟ್ರೀಯ ಗಾಯಕರಾದ ಶ್ರೀ ಸಂತವಾಣಿ ಸುಧಾಕರ್, ಕು. ದತ್ತಶ್ರೀ ಮತ್ತು ತಂಡದವರಿಂದ ಜಾನಪದ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಉದಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಕಾರ್ಯಕ್ರಮದ ಮುಖ್ಯ ಆಯೋಜಕರಾದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರ. ನರಸಿಂಹಮೂರ್ತಿ ಮತ್ತು ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮನವಿ ಮಾಡಿದ್ದಾರೆ.