ಹೊಸದಿಲ್ಲಿ: ಮಂಗಳವಾರ ನಡೆದ ವನಿತಾ ಹಾಕಿ ಇಂಡಿಯಾ ಲೀಗ್ ಹರಾಜಿನಲ್ಲಿ ಭಾರತದ ಉದಿತಾ ದುಹಾನ್ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿ ದ್ದಾರೆ. ಅವರು 32 ಲಕ್ಷ ರೂ.ಗೆ ಬೆಂಗಾಲ್ ಟೈಗರ್ ಪಾಲಾದರು. 26 ವರ್ಷದ ಉದಿತಾ ಹರಿಯಾಣದವರು.
29 ಲಕ್ಷ ರೂ.ಗೆ ಒಡಿಶಾ ವಾರಿಯರ್ ಸೇರಿಕೊಂಡ ನೆದರ್ಲೆಂಡ್ಸ್ನ ಡ್ರ್ಯಾಗ್ಫ್ಲಿಕರ್ ಯಿಬ್ಬಿ ಜಾನ್ಸನ್ 2ನೇ ದುಬಾರಿ ಆಟಗಾರ್ತಿ ಎನಿಸಿಕೊಂಡರು.
ಉಳಿದಂತೆ ಭರವಸೆಯ ಆಟಗಾರ್ತಿ ಲಾಲ್ರೆಮಿಯಾಮಿ 25 ಲಕ್ಷ ರೂ.ಗೆ ಬೆಂಗಾಲ್ ಟೈಗರ್, ಸುನೆಲಿತಾ ಟೊಪ್ಪೋ 24 ಲಕ್ಷ ರೂ.ಗೆ ಡೆಲ್ಲಿ ಎಸ್ಜಿ ಪೈಪರ್ ಪಾಲಾಗಿ ಗಮನ ಸೆಳೆದರು. ಭಾರತ ರಾಷ್ಟ್ರೀಯ ತಂಡದ ನಾಯಕಿ ಸಲೀಮಾ ಟೇಟೆ 20 ಲಕ್ಷ ರೂ. ಮೊತ್ತಕ್ಕೆ ಸೂರ್ಮ ಹಾಕಿ ಕ್ಲಬ್ ಪಾಲಾದರು.