ಬೆಂಗಳೂರು: ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡುವ ಮೂಲಕ ಹಣವನ್ನು ದ್ವಿಗುಣಗೊಳಿಸಬಹುದು ಎಂದು ಹೇಳಿ ಹೇಳಿಕೊಂಡು 34 ವರ್ಷದ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸರು ಮಹಿಳೆ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಏಳು ಆರೋಪಿಗಳನ್ನು ಬೆಂಗಳೂರು ಮತ್ತು ಮುಂಬೈನಲ್ಲಿ ಬಂಧಿಸಲಾಗಿದೆ, ಆದರೆ ಗ್ಯಾಂಗ್ನ ಇತರ ಐದು ಮಂದಿ ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಳು ಮಂದಿಯಲ್ಲಿ ಮೂವರು ಕೇರಳ, ಓರ್ವ ಮುಂಬೈ ಹಾಗೂ ಮೂವರು ಬೆಂಗಳೂರಿನವರಾಗಿದ್ದು, ಮಲೇಷ್ಯಾ ಮೂಲದ ಕಂಪನಿಯ ಪ್ರತಿನಿಧಿಗಳು ಎಂದು ಹೇಳಿ ವಂಚಿಸಿದ್ದಾರೆ.
‘ಮಲೇಷ್ಯಾ OIA: ಅಚಿಥಿ ಇಂಚಿತ್ ಸೆಡಿ ಹ್ಚಿಜ್’ ಎಂಬ ನಕಲಿ ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡುವ ಮೂಲಕ ಒಂದು ದಿನದೊಳಗೆ ಹೂಡಿಕೆಯನ್ನು ದ್ವಿಗುಣಗೊಳಿಸುವುದಾಗಿ ಆರೋಪಿಗಳು ಸಂತ್ರಸ್ತ ವ್ಯಕ್ತಿಯನ್ನು ನಂಬಿಸಿದ್ದರು.
ಬಳಿಕ ಆರ್ಟಿಜಿಎಸ್/ಎನ್ಇಎಫ್ಟಿ ಮೂಲಕ 3.5 ಕೋಟಿ ರೂಪಾಯಿಗಳನ್ನು ಒಂದೇ ದಿನದೊಳಗೆ ಹಿಂದಿರುಗಿಸುವುದಾಗಿ ಭರವಸೆ ನೀಡಿ 2 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ಮನವೊಲಿಸಿದ್ದರು.
ಸಂತ್ರಸ್ತ ವ್ಯಕ್ತಿ ನಾಗರಥಪೇಟೆಯಲ್ಲಿರುವ ಅವರ ಕಚೇರಿಗೆ ಭೇಟಿ ನೀಡಿ 2 ಕೋಟಿ ರೂಪಾಯಿಗಳನ್ನು ಹಸ್ತಾಂತರಿಸಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳು ಸಂತ್ರಸ್ತ ವ್ಯಕ್ತಿಗೆ 9,780 ರೂ.ಗಳನ್ನು ವರ್ಗಾಯಿಸಿ, ಅದು ಮುಂಗಡ ಹಣವಾಗಿದ್ದು, ಉಳಿದ ಹಣವನ್ನು ಶೀಘ್ರದಲ್ಲೇ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದಾಗ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಮೊಬೈಲ್ ಸಂಖ್ಯೆಗಳೂ ಕೂಡ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಬಳಿಕ ವಂಚನೆಗೊಳಗಾಗಿರುವುದನ್ನು ಮನಗಂಡ ಅವರು, ಪೊಲೀಸರಿಗೆ ದೂರು ನೀಡಿದ್ದಾರೆ.