ಬೆಂಗಳೂರು: ಕುಡುಕ ತಂದೆ, ಕೂಲಿ ಕೆಲಸ ಮಾಡೊ ತಾಯಿ. ಮನೆಯಲ್ಲಿ ನೆಮ್ಮದಿ ಇಲ್ಲದ ಬಾಲಕ ಮಾಡ್ತಾ ಇದ್ದಿದ್ದು ಏನು ಗೊತ್ತಾ?ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪೊಲೀಸರಿಗು ಕೆಲಸ ಕೊಡ್ತಿದ್ದ. ಹಾಗಾದ್ರೆ ಆ ಬಾಲಕ ಮಾಡ್ತಾ ಇದ್ದ ಕೆಲಸ ಏನು? ಈ ಬಾಲಕನ ಸ್ಥಿತಿ ಕೇಳಿದ್ರೆ ನಿಜಕ್ಕು ಅಯ್ಯೋ ಅನಿಸುತ್ತೆ..! ಹೊಟ್ಟೆ ತುಂಬ ಊಟ, ಕಣ್ ತುಂಬ ನಿದ್ದೆ ಸಿಗತ್ತೆ ಅಂತಾನೆ ಮನೆ ಬಿಟ್ಟು ಬರ್ತಿದ್ದ.
ಹಾಗೆ ಓದಿನಲ್ಲೂ ಕೂಡ ಅಷ್ಟೊಂದು ಆಸಕ್ತಿ ಇರದೇ ಮನೆ ಬಿಡ್ತಿದ್ದ ಬಾಲಕ ಇನ್ಸ್ ಪೆಕ್ಟರ್ ಉದಯ ರವಿ ಅವರ ಮಾನವೀಯ ಕೆಲಸದಿಂದ ಮತ್ತೆ ಪೋಷಕರ ಮಡಿಲು ಸೇರಿದ್ದ.ಶಂಕರಪುರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿರುವ ಉದಯ ರವಿ ಕಳೆದ ಆರು ದಿನದ ಹಿಂದೆ ರಾತ್ರಿ ಹೊತ್ತು ಫುಟ್ಪಾತ್ ನಲ್ಲಿ ನಿಂತಿದ್ದ ಬಾಲಕನನ್ನು ವಿಚಾರಿಸಿದಾಗ ತಂದೆ ತಾಯಿ ಗೊತ್ತಿಲ್ಲ,ಊರು ಗೊತ್ತಿಲ್ಲ ಎಂದಿದ್ದ. ಬಳಿಕ ಬಾಲ ಮಂದಿರಕ್ಕೆ ಬಾಲಕನನ್ನು ಬಿಟ್ಟು ಬಂದಿದ್ದ ಪೊಲೀಸರು ಬಾಲಕನ ಪೋಷಕರ ಪತ್ತೆಗೆ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದ್ದರು.
ಪೊಲೀಸ್ ಪ್ರಕಟಣೆ ನೋಡಿ ಬಾಲಕನ ಪೋಷಕರು ಆತನನ್ನು ಕರೆದೊಯ್ಯಲು ಅತ್ತಿಬೆಲೆ ಠಾಣೆಗೆ ತೆರಳಿದ್ದಾರೆ.ಬಾಲಕನ ವಿಚಾರಣೆ ವೇಳೆ ಕುತೂಹಲಕರ ಸಂಗತಿ ಬಯಲಿಗೆ ಬಂದಿದೆ. ಬಾಲಕನಿಗೆ ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಸಿಗ್ತಿರಲಿಲ್ಲ. ಹಾಗಾಗಿ ಮನೆ ಬಿಟ್ಟು ಬಂದು ಫುಟ್ಪಾತ್ ನಲ್ಲಿ ನಿಂತು ಕೊಳ್ತಿದ್ದ. ಪೊಲೀಸರು ಆತನನ್ನ ಬಾಲಮಂದಿರಕ್ಕೆ ಬಿಟ್ಟು ಬರ್ತಿದ್ರು ಬಾಲ ಮಂದಿರದಲ್ಲಿ ಊಟ ತಿಂಡಿ ಮಾಡಿ ನೆಮ್ಮದಿಯಾಗಿ ಇರ್ತಿದ್ದ.
ಇದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಾಲಕ ಈ ಹಿಂದೆ ಕೂಡ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿದ್ದ. ಅತ್ತಿಬೆಲೆ, ಸರ್ಜಾಪುರ, ಹೊಸಕೋಟೆ ಪೊಲೀಸರ ಕೈಗೆ ಸಿಕ್ಕಿದ್ದ ಬಾಲ ಮಂದಿರಕ್ಕೆ ಬಿಟ್ಟು ಬಂದಿದ್ದ ಪೊಲೀಸರು. ಬಳಿಕ ಪೋಷಕರು ಬಂದು ಕರೆದುಕೊಂಡು ಹೋಗ್ತಿದ್ರು, ಈ ಬಾರಿ ಮತ್ತೆ ಶಂಕರಪುರ ಪೊಲೀಸ್ ಠಾಣೆಬಳಿ ಪತ್ತೆಯಾಗಿದ್ದ ಮಕ್ಕಳನ್ನು ಬೇಕಾಬಿಟ್ಟಿ ಬಿಡೊಪೋಷಕರಿಗೆ ಇದು ಪಾಠವಾಗಿದೆ.