55 ವರ್ಷಗಳಲ್ಲಿ ಹಂತ ಹಂತವಾಗಿ ಎಂಎಸ್ಎಂ ಸಾಹಿತ್ಯ ಕ್ಷೇತ್ರ ದಲ್ಲಿ ಬೆಳೆದ ಬಗ್ಗೆ ವರ್ಣನೆ ಮಾಡಿದ ಡಾ.ಬಾಬು ಕೃಷ್ಣಮೂರ್ತಿಯವರು ಇದೊಂದು ಐತಿಹಾಸಿಕ ಸಾಧನೆ, ಹನ್ನರಡು ಸಾವಿರ ಸಂಚಿಕೆ ಗಳಿಗೆ ಟಿವಿ ಸಂಭಾಷಣೆ ಬರೆಯುವುದು ಸಾಮಾನ್ಯ ಮಾತಲ್ಲ ಎಂಬುದಾಗಿ ಮೆಚ್ಚುಗೆ ಸೂಚಿಸಿದರು.
ಎಂಎಸ್ಎನ್ – 75 ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಹಾಸ್ಯ ಸಾಹಿತ್ಯ ಸಾಮಾಜಿಕ ಸಾಂಸಾರಿಕ ನೆಮ್ಮದಿಯನ್ನು ಉಂಟುಮಾಡುತ್ತದೆ, ಹಾಸ್ಯದ ಮುಖಾಂತರವಾಗಿ ಸಮಾಜವನ್ನು ತಿದ್ದಲು ಸಾಧ್ಯವಿದೆ, ಇಂಥ ಕೆಲಸ ಎಂಎಸ್ಎಂ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು. ಎಂಎಸ್ಎನ್ ಬರೆದ ಪುತ್ರಕಾಮ್ಯ ಕಾದಂಬರಿಯನ್ನು ಬಿಡುಗಡೆ ಮಾಡಿದ ಡಾಕ್ಟರ್ ಸೋಮೇಶ್ವರ ಅವರು ಇದು JAJ ತಂತ್ರಜ್ಞಾನದ ಅನುಕೂಲತೆಗಳನ್ನು ಕುರಿತ ಮೊದಲ ಹಾಸ್ಯ ಕಾದಂಬರಿ ಎಂದು ತಿಳಿಸಿ ಮಹಾಭಾರತದ ಕಾಲದಲ್ಲಿ ಇದ್ದ ನಿಯೋ ಗ ಪದ್ಧತಿಯ ವಿವರಗಳನ್ನು ನೀಡಿದರು.
ಮಹಾ ಭಾರತದ ನಿಯೋಗ ಪದ್ಧತಿಯೇ ಇಂದಿನ ಐವಿಎಫ್ಆಗಿ ಪರಿವರ್ತನೆ ಹೊಂದಿದೆ. ಈ ಕಾದಂಬರಿ ಪ್ರತಿಪುಟದಲ್ಲೂ ನಗಿಸುತ್ತಾ ಓದಿಸಿ ಕೊಳ್ಳುತ್ತಾ ಹೋಗುತ್ತದೆ ಎಂದು ಪ್ರಶಂಸೆ ಮಾಡಿದರು.ಸಿಹಿಕಹಿ ಚಂದ್ರು ಅವರು ಮಾತನಾಡುತ್ತಾ ತಮ್ಮ ಮತ್ತು ಎಂ ಎಸ್ ಎನ್ ಅವರ ಟಿವಿ ಕ್ಷೇತ್ರದ ಸಂಬಂಧ 30 ವರ್ಷದ್ದು ಎಂದು ವರ್ಣಿಸಿ ಪಾಪ ಪಾಂಡು ಸಿಲ್ಲಿ ಲಲ್ಲಿ ಸೇರಿದಂತೆ ಅವರು ಬರೆದಿರುವ ಹನ್ನೆರಡು ಸಾವಿರ ಎಪಿಸೋಡ್ಗಳಲ್ಲಿ ತಮಗೆ 8,000 ಎಪಿಸೋಡ್ ಗಳನ್ನು ಬರೆದಿದ್ದಾರೆ.
ಎಲ್ಲೂ ಯಾವತ್ತೂ ಯಾವುದೇ ಜೋಕನ್ನು ಅವರು ರಿಪೀಟ್ ಮಾಡಿಲ್ಲ, ಜೋಕುಗಳ ಪುನರಾವರ್ತನೆ ಆಗಿಲ್ಲ, ಶಿಸ್ತಿನ ಬರವಣಿಗೆ ಇವರದು ಎಂದರು. ಜಾಗೃತಿ ಟ್ರಸ್ಟ್ ನವರು ಏರ್ಪಡಿಸಿದ್ದ ಈ ಸುಂದರ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಿಕ್ಕಿರಿದ ಪ್ರೇಕ್ಷಕರಿಂದ ಸತತ ಕರತಾಡನಗಳು ಆಗುತ್ತಿತ್ತು. ಅಧ್ಯಕ್ಷ ನಾಗೇಶ್ ಅವರು ಇದೇ ಸಂದರ್ಭದಲ್ಲಿ ಹತ್ತು ಮಹಿಳಾ ಸಾಧಕಿಯರಿಗೆ ಕೆಂಪಮ್ಮ ಪ್ರಶಸ್ತಿ ವಿತರಣೆ ಮಾಡಿದರು. ಸರ್ಕಾರದ ಸಾರಿಗೆ ಇಲಾಖೆಯ ಉಪ ಕಾರ್ಯದರ್ಶಿಗಳಾಯದ ಬಿ ಎಸ್ ಮಂಜುನಾಥ್ ಅವರು ಕೆಂಪೇಗೌಡರ ತಾಯಿ ಕೆಂಪಮ್ಮ ಸಾಧನೆಗಳನ್ನ ವರ್ಣನೆ ಮಾಡಿದರು. ಮಗನನ್ನು ಉಳಿಸಿಕೊಳ್ಳಲು ತಾಯಿ ಕೆಂಪಮ್ಮ ಅದೆಷ್ಟು ಕಷ್ಟ ಪಟ್ಟಳು ಎಂಬುದನ್ನು ವರ್ಣಿಸಿದರು.
ಆ ಮಗನೇ ಅನಂತರದ ದಿನಗಳಲ್ಲಿ ಕೆಂಪೇಗೌಡನಾಗಿ ಬೆಂಗಳೂರು ಕಟ್ಟಿದ ಚಾರಿತ್ರಿಕ ಪುರುಷ ಎಂಬ ವಿಷಯವನ್ನು ಸ್ವಾರಸ್ಯಪೂರ್ಣವಾಗಿ ತಿಳಿಸಿದರು. ಪತ್ರಿಕಾ ಸಂಪಾದಕಿ ಡಾ. ಜಿ.ವೈ.ಪದ್ಮ ನಾಗರಾಜು, ಚಿತ್ರ ನಟಿ ರೇಖಾದಾಸ್ ಜಾನಪದ ಗಾಯಕಿ ಅಂಬುಜ ಬೀರಪ್ಪ ಮೊದಲಾದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.