ಕನಕಪುರ: ನಗರದ ಎಂ.ಜಿ ರಸ್ತೆಯಲ್ಲಿರುವ ಎಂ.ಎಸ್ ಗೋಲ್ಡ್ $ ಡೈಮಂಡ್ಸ್ ಸಂಸ್ಥೆ ಕೇಕ್ ಕತ್ತರಿಸಿ ವೈದ್ಯರನ್ನು ಸನ್ಮಾನಿಸುವ ಮೂಲಕ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಎಂ ಎಸ್ ಗೋಲ್ಡ್ ಅಂಡ್ ಡೈಮಂಡ್ ವ್ಯವಸ್ಥಾಪಕ ಕಾಮ್ರೇಡ್ ಮನ್ಸೂರ್ ಮಾತನಾಡಿ, ಜೂಲೈ-1 ವೈದ್ಯರ ದಿನಾಚಾರಣೆಯಾಗಿದ್ದುಅವರ ಸೇವೆ ದೇಶಕ್ಕೆ ಅನನ್ಯವಾದದ್ದು ಅವಿರತ ಶ್ರಮ ಮಾನವ ಕುಲಕ್ಕೆ ವರದಾನವಾಗಿದೆ ವೈದ್ಯರು ದೇವರ ಪ್ರತೀಕ ಎಂದು ತಿಳಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಉಮಾದೇವಿ ವೈದ್ಯರ ದಿನಾಚರಣೆಯನ್ನು ಎಂ ಎಸ್ ಗೋಲ್ಡ್ ಅಂಡ್ ಡೈಮಂಡ್ ಖಾಸಗಿ ಸಂಸ್ಥೆ ಪ್ರಥಮ ಭಾರಿಗೆ ನಮ್ಮ ಸೇವೆಯನ್ನು ಗುರುತಿಸಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾಕ್ಟರ್ ವಿಜಯ್ ಕುಮಾರ್, ಡಾಕ್ಟರ್ ಉಮಾದೇವಿ, ಡಾಕ್ಟರ್ ಶಿವಲಿಂಗಪ್ಪ, ಡಾಕ್ಟರ್ ರಶ್ಮಿ, ಡಾಕ್ಟರ್ ಮುಷ್ತಾಕ್, ಡಾಕ್ಟರ್ ಶಶಿಧರ್, ಡಾಕ್ಟರ್ ಸೌಂದರ್ಯ, ಡಾಕ್ಟರ್ ಸಂಧ್ಯಾ ಹಾಗೂಸಂಸ್ಥೆಯ ವ್ಯವಸ್ಥಾಪಕರಾದ ರಮೇಶ್, ಮಹಾ ದೇವ ಪ್ರಸಾದ್, ವಿಷ್ಣು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.