ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿರುವ ಪ್ಯೂರ್ ಇವಿ ಕಂಪನಿಯು ಇಂದು ತನ್ನ ಎಕ್ಸ್ ಪ್ಲಾಟ್ಫಾರ್ಮ್ ನ ಅಪ್ ಗ್ರೇಡೆಡ್ ವರ್ಷನ್ ಆದ ಎಕ್ಸ್ ಪ್ಲಾಟ್ಫಾರ್ಮ್ 3.0 ಅನ್ನು ಬಿಡುಗಡೆ ಮಾಡಿದೆ.
ಅತ್ಯಾಧುನಿಕ ಎಐ ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸಲಿರುವ ಈ ಹೊಸ ಪ್ಲಾಟ್ಫಾರ್ಮ್ ಅತ್ಯುತ್ತಮ ವಾಹನ ಕಾರ್ಯಕ್ಷಮತೆ, ಕನೆಕ್ಟಿವಿಟಿ ಒದಗಿಸುವ ಮೂಲಕ ಗ್ರಾಹಕರಿಗೆ ಉತ್ತಮ ರೈಡಿಂಗ್ ಅನುಭವ ಒದಗಿಸಲಿದೆ. ವಿಶೇಷವಾಗಿ ಸವಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ.ಎಕ್ಸ್ ಪ್ಲಾಟ್ಫಾರ್ಮ್ 3.0ನಲ್ಲಿ ಥ್ರಿಲ್ ಮೋಡ್ ಎಂಬ ಅತ್ಯುತ್ತಮ ಫೀಚರ್ ಅನ್ನು ಪರಿಚಯಿಸಲಾಗಿದ್ದು. ಇದು ಟಾರ್ಕ್ ಮತ್ತು ಒಟ್ಟು ಕಾರ್ಯಕ್ಷಮತೆಯನ್ನು ಶೇ.25ರಷ್ಟು ಜಾಸ್ತಿ ಮಾಡುತ್ತದೆ.
ರೈಡರ್ ಗಳಿಗೆ ಹೆಚ್ಚು ಆಹ್ಲಾದಕರವಾದ ರೈಡಿಂಗ್ ಅನುಭವ ಒದಗಿಸುತ್ತದೆ. ಪವರ್ ಡ್ರೈವಿಂಗ್ ನಲ್ಲಿ ಆಸಕ್ತಿ ಇರುವವರಿಗಾಗಿಯೇ ಈ ಫೀಚರ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಈ ಮೂಲಕ ಎಲೆಕ್ಟ್ರಿಕ್ ವಾಹನ ಕಾರ್ಯಕ್ಷಮತೆ ವಿಚಾರದಲ್ಲಿ ಹೊಸ ಮಾನದಂಡ ಹಾಕಿಕೊಡಲಿದೆ.ಈ ಸಂದರ್ಭದಲ್ಲಿ ಮಾತನಾಡಿದ ಪ್ಯೂರ್ ಇವಿ ಸಂಸ್ಥಾಪಕ ಮತ್ತು ಎಂಡಿ ಡಾ. ನಿಶಾಂತ್ ಡೊಂಗಾರಿ ಅವರು, “ಅತ್ಯಾಧುನಿಕ ಎಐ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲಸ ಮಾಡುವ ಎಕ್ಸ್ ಪ್ಲಾಟ್ಫಾರ್ಮ್ 3.0 ಅನ್ನು ಅನಾವರಣ ಮಾಡುವ ಮೂಲಕ ನಾವು ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಹೇಳಿದರು.
ಈ ಪ್ಲಾಟ್ಫಾರ್ಮ್ ಅತ್ಯಾಧುನಿಕ ಪ್ರಿಡಿಕ್ಟಿವ್ ಎಐ ತಂತ್ರಜ್ಞಾನವನ್ನು ಹೊಂದಿದ್ದು, ಈ ಮೂಲಕ ಪ್ಲಾಟ್ ಫಾರ್ಮ್ ರೈಡರ್ ನ ವರ್ತನೆಯಿಂದ ಕಲಿಯುತ್ತದೆ ಮತ್ತು ವಿವಿಧ ರೈಡಿಂಗ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ.