ಹುಬ್ಬಳ್ಳಿ: `ಜೆಡಿಎಸ್’ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಂದಿರೋದ್ರಿಂದ ನಮಗೆ ಲೋಕಸಭೆ ಯಲ್ಲಿ ಅನುಕೂಲ ಆಗಿದೆ. ಜೆಡಿಎಸ್ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ.
ಎರಡು ಕಡೆಯವರಿಗೂ ಲಾಭ ಆಗಿದೆ ಎಂದರು.ಶಿಗ್ಗಾಂವಿ ಟಿಕೆಟ್ ಬೊಮ್ಮಾಯಿ ಮಗನಿಗೆ ನೀಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಸವರಾಜ ಬೊಮ್ಮಾಯಿ ಅವರನ್ನು ಯಾಕೆ ಎಳೀತೀರಿ, ಅವರದ್ದೇನು ತಪ್ಪಿಲ್ಲ. ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಇದು ಪಾಲನೆ ಆಗಬೇಕು. ಬೊಮ್ಮಾಯಿ ಅವರನ್ನು ಯಾಕೆ ಬಲಿ ಪಶು ಮಾಡತ್ತೀರಿ? ಎಲ್ಲರಿಗೂ ಕೊಟ್ಟ ಮೇಲೆ ಅವರು ಮಗನಿಗೆ ಕೇಳಿದ್ದಾರೆ. ನಮ್ಮ ಪಕ್ಷದ ಹಿರಿಯರು ನಿರ್ಣಯ ಮಾಡತ್ತಾರೆ ಎಂದರು.
ಸಿ.ಪಿ.ಯೋಗೇಶ್ವರ್ಗೆ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ಉಪಚುನಾವಣೆ ಯಲ್ಲಿ ಟಿಕೆಟ್ ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಅನ್ನೋದು ಮುಖ್ಯ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ತಿಳಿಸಿದ್ದಾರೆ.
ಒಂದು ಕಪ್ಪು ಚುಕ್ಕೆ ಇಲ್ಲಾ ಸಿಎಂ ಎಂದಿದ್ದ ಸಿದ್ದರಾಮಯ್ಯ. ಮತ್ತೆ ಈಗ ಮುಡಾ ಹಗರಣ ಯಾಕೆ ಮಾಡಿದ್ರು? ಆವಾಗ್ಲೇ ಕೊಟ್ಟಿದ್ರೆ ಮುಗಿದು ಬಿಡ್ತಿತ್ತು. ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಟ್ಟು ಮುಕ್ತ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಗಂಗಾಜಲದಿಂದ ಬಿಜೆಪಿ ಕಚೇರಿಗಳ ಶುದ್ದಿಕರಣ ವಿಚಾರವಾಗಿ ಮಾತನಾಡಿ, ಯಾರಾದ್ರೂ ಕೃಷ್ಣ ಹುಟ್ಟುತ್ತಾರೆ, ಮಾಡ್ತಾರೆ. ಹಳೇ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರೋದು ದುರಂತ. ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ರು. ದೇಶದಲ್ಲಿ ಯಾವುದೇ ಪಕ್ಷ ಇದ್ರು ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಪೊಲೀಸರ ನೈತಿಕತೆ ಅಡಗಿ ಹೋಗುತ್ತದೆ ಎಂದರು.
ಕೆಜೆ ಹಳ್ಳಿ ಡಿಜೆ ಹಳ್ಳಿ ನಂತರ ಹುಬ್ಬಳ್ಳಿ ಗಲಭೆ ಬಹಳ ಗಂಭೀರವಾದದ್ದು ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ತೆಗೆದುಕೊಳ್ಳಬಾರದು.
ಹಾಗೇನಾದ್ರೂ ಮಾಡಿದ್ರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ. ಬಿಜೆಪಿ ಅವರು ಇದ್ದಾಗ ಅಮಾಯಕರ ಮೇಲೆ ಪ್ರಕರಣ ಹಾಕಿದ್ರು. ರೈತರನ್ನು ದನಕ್ಕೆ ಹೊಡೆದಂತೆ ಹೊಡೆದು, ದೇಶದ್ರೋಹಿಗಳನ್ನು ಗುಂಡು ಹಾರಿಸಿ ಕೊಲ್ಲಬೇಕು. ಮುಸ್ಲಿಂರ ತುಷ್ಟಿಕರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಹರಿಹಾಯ್ದರು.