ಬೆಂಗಳೂರು: ಎಡಿಜಿಪಿ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಎಸ್ಐಟಿಯ ಮುಖ್ಯಸ್ಥ ಚಂದ್ರಶೇಖರ್ ರವರನ್ನು ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿ ನಡೆಸಿ ನಿಂದನೆ ಮತ್ತು ಸರ್ಕಾರಿ ಕೆಲಸಕ್ಕೆ ಧಮ್ಕಿ ಹಾಕಿದ ಹಿನ್ನೆಲೆಯಲ್ಲಿ ಏ ಡಿ ಜಿ ಪಿ ರವರು ಈ ಹಿಂದೆ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಂಜಯನಗರ ಪೊಲೀಸರು ಎಡಿಜಿಪಿ ರವರ ದೂರನ್ನು ಎನ್ ಸಿ ಆರ್ ಮಾಡಿ ಕೈ ಬಿಡಲಾಗಿತ್ತು, ಈ ಹಿ ನೆಲೆಯಲ್ಲಿ ಎಡಿಜಿಪಿ ರವರು ೪೨ನೇ ಕೋರ್ಟ್ ನಿಂದ ಎಫ್ಐಆರ್ ಮಾಡಲು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಹಾಲಿ ಸಚಿವ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ರವರ ಮೇಲೆ ನ್ಯಾಯಾಲಯದಿಂದ ಆದೇಶವಾಗಿತ್ತು.
ಈ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಡಿಸಿಪಿ ಸಯಿದುಲ್ಲಾ ರವರು ಇಂದು ಸಂಜೆಗೆ ಮಾತನಾಡಿ ಮೇಲ್ಕಂಡ ಕೇಸ್ನಲ್ಲಿ ಏಳು ವರ್ಷಕ್ಕಿಂತ ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ಆರೋಪಿಗಳಿಗೆ ನೋಟಿಸ್ ನೀಡಲು ಸಮಾಲೋಚನೆ ನಡೆದಿದೆ ಎಂದು ತಿಳಿಸಿದರು. ನೇರವಾಗಿ ಬಂಧಿಸಲು ಸಾಧ್ಯವಾಗದ ಕಾರಣ ಸಂಜಯ್ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಯಾವತ್ತು ಕರಿಸಬೇಕು ಎಂಬುದನ್ನು ಹಿರಿಯ ಅಧಿಕಾರಿಗಳು ಮತ್ತು ಕಾನೂನು ಸಲಹೆಗಾರರ ಸಲಹೆಯನ್ನು ಪಡೆದು ನಂತರ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಮತ್ತೊಂದು ವಿಚಾರ ಈ ಕೇಸನ್ನು ಸಿ ಐ ಡಿ ವರ್ಗಾವಣೆ ಮಾಡಲು ಸಹ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಒಂದು ಪಕ್ಷ ಸಂಜಯನಗರ ಪೊಲೀಸ್ ಠಾಣೆಗೆ ಕರೆಸಿದರೆ ಚನ್ನಪಟ್ಟಣ ಬೈ ಎಲೆಕ್ಷನ್ ನಂತರ ಕರೆಸುವುದೇ ಅಥವಾ ಈಗಲೇ ಕರೆಸಬೇಕಾಗುತ್ತದೆಯೇ ಎಂದು ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿದರು.