ಮಾಗಡಿ: ರಾಜಧಾನಿ ಬೆಂಗಳೂರು ನಗರದ ವಿವಿಯಲ್ಲಿ ಎಂ.ಎಸ್ಸಿ ಪದವೀಧರೆ ಗಗನಶ್ರೀ ಎಚ್.ಪಿ. ರಾಸಾಯನ ಶಾಸ್ತ್ರ ವಿಷಯದಲ್ಲಿ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಗಳಿಸಿ ಬೆಂಗಳೂರು ವಿವಿಗೆ ಹಾಗೂ ಮಾಗಡಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿರುವ ಇವರು ಪುರಸಭಾ ಸದಸ್ಯೆಯ ಪುತ್ರಿಯಾಗಿದ್ದಾರೆ. ನಗರದ ವಿವಿ ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಜೀವ ರಾಸಾಯನ ಶಾಸ್ತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಮಾಗಡಿ ಮಾನಸ ಶಾಲೆಯ ಶ್ರೀವಿದ್ಯಾನಿಧಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸ ಮಾಡಿ ಅತ್ಯುನ್ನತ ಸಾಧನೆ ಮಾಡಿದ್ದರು.
ತದನಂತರ ಕುಣಿಗಲ್ ವಿಜಯ ವ್ಯಾಲಿಯಲ್ಲಿ ಪಿಯು ಹಾಗೂ ಬಿಎಂಎಸ್ ಕಾಲೇಜಿನಲ್ಲಿ ಪದವಿ ಮುಗಿಸಿ ರಾಮಯ್ಯ ಕಾಲೇಜಿನಲ್ಲಿ ಸ್ನಾತ ಕೋತ್ತರ ಪದವಿ ಮಾಡಿದ್ದಾರೆ.ಇದು ಮಾಗಡಿ ಕೀರ್ತಿಯನ್ನು ಹೆಚ್ಚುಸುವಲ್ಲಿ ಪ್ರೇರಣೆಯಾಗಿದೆ. ತಂದೆ ಎಚ್.ಜೆ.ಪುರುಷೋತ್ತಮ್ ಮಾತನಾಡಿ, ಯಾವುದೇ ಮಕ್ಕಳು ಒಂದು ಒಳ್ಳೆಯ ಸಾಧನೆ ಮಾಡಿದ್ದಾರೆ ಎಂದರೆ ಅದಕ್ಕಿಂತ ಖುಷಿಪಡುವ ವಿಷಯವೇ ಒಂದು ಹೆಮ್ಮೆಯ ಸಂಗತಿ ಎಂದು ಪುರುಷೋತ್ತಮ್ ಹರ್ಷ ವ್ಯಕ್ತಪಡಿಸಿದರು.