ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು, ನಾಗಾಪುರ, ಸಾದರಹಳ್ಳಿಯಲ್ಲಿ ಸಂಡೇ ದಿನವೂ ಎನ್ಡಿಎ ಅಭ್ಯರ್ಥಿ ಪರವಾಗಿ ಕೇಂದ್ರ ಸಚಿವರಾದ ಸೋಮಣ್ಣ ಅವರು, ಪ್ರತಾಪ್ ಸಿಂಹ ಅವರು ಭರ್ಜರಿ ಮತಯಾಚನೆ ಮಾಡಿದರು.
ಈ ವೇಳೆ ರಸ್ತೆ, ನೀರಿನ ವ್ಯವಸ್ಥೆ, ಉದ್ಯೋಗ ಸೇರಿದಂತೆ ಹಲವು ಸಮಸ್ಯೆಗಳ ಅಹವಾಲು ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರು.ಮತಯಾಚನೆ ಜೊತೆಗೆ ಸ್ಥಳೀಯ ಸಮಸ್ಯೆಗಳ ಆಲಿಸಿ ಪಟ್ಟಿ ಮಾಡಿದರು.
ನಂತರ ಸಭೆಯಲ್ಲಿ ಕೇಂದ್ರ ಕೇಂದ್ರ ಸಚಿವರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಆಗಿರುವ ಸಿಪಿ ಯೋಗೇಶ್ವರ್ ಅವರನ್ನ ಸಚಿವರು ತರಾಟೆಗೆ ತೆಗೆದುಕೊಂಡರು.
ಈ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ನಮ್ಮ ಜೊತೆ ಇದ್ರು. ಅವರು ಆತುರಕ್ಕೆ, ಅಧಿಕಾರದ ಆಸೆಗೆ ಸಣ್ಣ ತಪುö್ಪ ಅರಿವಾಗುವ ರೀತಿ ಮಾಡಬೇಕು ನಾವು ಎಲ್ಲರು ಸೇರಿ ಮಾಡಬೇಕು.ರಾಜ್ಯ ಸರ್ಕಾರದ ಒಬ್ಬೊಬ್ಬ ಮಂತ್ರಿ ಒಂದೊAದು ರೀತಿ ಮಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವರು ಕಿಡಿಕಾರಿದರು.
ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆದಂಗೆ ಮಾಡ್ತಾ ಇದ್ದಾರೆ: ನಾನು ಸಿ.ಪಿ.ಯೋಗೇಶ್ವರ್ ಅವರಿಗೆ ಹೇಳಿದ್ದೆ, ನಿಮಗೆ ನಿಮ್ಮ ಸ್ಥಾನ ಸಿಗುತ್ತೆ ಅಂತ ಮಾತಾಡಿದ್ದೆ. ಆದರೆ ಅವರು ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಮಾಡ್ತಾ ಇದ್ದಾರೆ. ಮೋದಿ ಅಭಿವೃದ್ಧಿ ಕೆಲಸ ಮಾಡ್ತಾ ಇದ್ದಾರೆ, ಚನ್ನಪಟ್ಟಣ ಅವರ ಕಣ್ಣು,ಅವರ ಹೃದಯ ಎಂದು ತಿಳಿಸಿದರು.
ನಿರ್ಜೀವ ಸರ್ಕಾರ ಇದು: ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ನನಗೆ ಬೆಂಬಲ ಕೊಡದೇ ಇದ್ದರೆ ನಾನು ಮಂತ್ರಿ ಆಗತಾ ಇರಲಿಲ್ಲ, ನನಗೆ ಈ ಸ್ಥಾನ ಸಿಕ್ತಾ ಇರಲಿಲ್ಲ. ಈ ಸರ್ಕಾರ ನಿಂತ ನೀರು, ನಿರ್ಜೀವ ಸರ್ಕಾರ, ಮೂರು ದಿನ ಹಿಂದೆ ಇದ್ದ ಟ್ರೆಂಟ್ ಈಗಿಲ್ಲ.ಯಾರದ್ದೋ ಆಸ್ತಿ, ಎಲ್ಲಮ್ಮನ ಜಾತ್ರೆ ಅಂದAಗಾಗಿದೆ ಎಂದರು.
ನಿಖಿಲ್ ಕುಮಾರಸ್ವಾಮಿಯವರು ಅವರ ತಂದೆಯವರಿಗಿAತ ಮುಂದೆ ಹೋಗುವ ಸಾಮರ್ಥ್ಯ ಅವರಿಗಿದೆ. ಕಾಂಗ್ರೆಸ್ ನವರ ತುಮಕೂರಿನಲ್ಲಿ ಸೋಮಣ್ಣ ಸೋಲ್ತಾರೆ ಅಂದ್ರು, ಆಗ ದೇವೆಗೌಡರು ಐದು ಭಾರಿ ಭೇಟಿ ಮತ್ತು ಕುಮಾರಸ್ವಾಮಿ ಐದು ಸಲ ಭೇಟಿ ನೀಡಿದರು ಹಾಗಾಗಿ ನಾನು ಗೆದ್ದೆ ಎಂದು ದೇವೇಗೌಡರು ಮತ್ತು ಕುಮಾರಣ್ಣನನ್ನ ಸ್ಮರಿಸಿಕೊಂಡರು. ಕಾಂಗ್ರೆಸ್ ಸರ್ಕಾರದಲ್ಲಿ ೧೩೬ಜನ ಶಾಸಕರು ಇದ್ದಾರೆ, ಅದೇನು ಕಡಿಮೆ ಆಗಲ್ಲ. ನಾವೇನು ಗಾಯ ಮಾಡೋದಕ್ಕೆ ಹೋಗಲ್ಲ, ಅವರ ಕಾಲಿನ ಮೇಲೆ ಅವರೇ ಕಲ್ಲು ಹಾಕಿದ್ದಾರೆ, ಔಷಧಿಯೂ ಸಿಗುತ್ತಿಲ್ಲ ಅವರಿಗೆ ಎಂದು ತಿಳಿಸಿದರು.
ಚುನಾವಣೆ ಮುಗಿದ ಮೇಲೆ ನಾನು ಕುಮಾರಸ್ವಾಮಿ, ನಿಖಿಲ್ ಅವರು ಒಟ್ಟಿಗೆ ಬರುತ್ತೇವೆ.ಇಲ್ಲಿನ ಸಮಸ್ಯೆಗಳ ನೀರಾವರಿ ಬಗ್ಗೆ ಯೋಜನೆ ರೂಪಿಸುತ್ತೇವೆ. ಎಂದು ಚನ್ನಪಟ್ಟಣ ತಾಲ್ಲೂಕಿಗೆ ಭರವಸೆ ನೀಡಿದರು.
ಚನ್ನಪಟ್ಟಣ ಮತ್ತು ಮದ್ದೂರು ಮಾರ್ಗ ಮದ್ಯೆ ರೈಲ್ವೆ ನಿಲ್ದಾಣವನ್ನು ಮಾಡಿದರೆ ೧೫೦೦ ಸಾವಿರ ಯುವಕರಿಗೆ ಉಪಯೋಗ ಅಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸೋಮಣ್ಣ ಹತ್ತಿರ ಪ್ರಸ್ತಾಪಿಸದಾಗ ತಕ್ಷಣವೇ ಅದನ್ನ ಕಾರ್ಯರೂಪಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ರಾಮನಗರ ಜಿಲ್ಲೆಯ ರೈಲ್ವೆ ಇಲಾಖೆಯಿಂದ ಏನೇ ಸಮಸ್ಯೆ ಇದ್ದರು ನಾನು ಕೂಡಲೇ ಬಗೆಹರಿಸುತ್ತೇನೆ. ನಿಖಿಲ್ ಅವರನ್ನ ಗೆಲ್ಲಿಸಿ ಕೊಡಿ ಅವರ ಸಮ್ಮುಖದಲ್ಲಿ ದೆಹಲಿಗೆ ಹೋಗಿ ರೈಲ್ವೆ ಸಮಸ್ಯೆಯನ್ನು ಬಗೆ ಹರಿಯುತ್ತೆವೆ. ನಿಮ್ಮ ಸೇವಕನಾಗಿ ನಿಮ್ಮ ಮುಂದೆ ಬಂದ್ದಿದಾನೆ. ಅವರಿಗೆ ಆಶೀರ್ವಾದ ಮಾಡಿ ಎಂದು ಕೇಂದ್ರದ ರೈಲ್ವೆ ಸಚಿವರಾದ ವಿ. ಸೋಮಣ್ಣ ತಿಳಿಸಿದರು.