ನವದೆಹಲಿ: ಭಾರತದ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿ ರುವ ಎಕ್ಸಿಸ್ ಬ್ಯಾಂಕ್,`ವಾತ್ಸಲ್ಯ’ ಹೆಸರಿನ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಪ್ರಾರಂಭಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ)ದೊಂದಿಗೆ ಕೈಜೋಡಿಸಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆರ್ಥಿಕ ಭವಿಷ್ಯ ಸುರಕ್ಷಿತಗೊಳಿಸುವ ಯೋಜನೆ ಇದಾಗಿದೆ.
ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಕೇಂದ್ರ ಬಜೆಟ್ನಲ್ಲಿ ಘೋಷಿಸಿದಂತೆ, ತಮ್ಮ ಮಕ್ಕಳಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ಯೋಜಿಸುವಲ್ಲಿ ಕುಟುಂಬಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಈ ಉಪಕ್ರಮವು ಪ್ರಮುಖ ಹೆಜ್ಜೆಯಾಗಿದೆ.ದೆಹಲಿಯಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಕ್ಸಿಸ್ ಬ್ಯಾಂಕ್ನಿಂದ ಆಯ್ಕೆಯಾದ ಹೈದರಾಬಾದ್ನ ಶ್ರೀಮತಿ ಲಂಬಾ ಕರ್ಣಂ ಆದಿತ್ರಿ ಅವರಿಗೆ ಸಾಂಕೇತಿಕ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (ಪಿಆರ್ ಎಎನ್-ಪ್ರಾಣ್)ಯನ್ನು ಹಸ್ತಾಂತರಿಸಿದರು.
ಉಪಕ್ರಮದ ಭಾಗವಾಗಿ, ಎಕ್ಸಿಸ್ ಬ್ಯಾಂಕ್ ಒಟ್ಟು 17 ಎನ್|ಪಿಎಸ್ ವಾತ್ಸಲ್ಯ ಖಾತೆಗಳನ್ನು ತೆರೆಯಿತು, ಮಕ್ಕಳಿಗೆ ಸಾಂಕೇತಿಕ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ(ಪ್ರಾಣ್)ಗಳನ್ನು ಹಸ್ತಾಂತರಿಸಿತು. ಹಿರಿಯ ಬ್ಯಾಂಕ್ ಅಧಿಕಾರಿಗಳು ಸಾಂಕೇತಿಕ ಪ್ರಾಣ್ಗಳನ್ನು ಹಸ್ತಾಂತರಿಸಿದರು. ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಸುಮಾರು 16 ಮಕ್ಕಳಿಗೆ ಎನ್ ಪಿಎಸ್ ವಾತ್ಸಲ್ಯ ಖಾತೆಗಳನ್ನು ತೆರೆದರು.
ಈ ಉಪಕ್ರಮದ ಕುರಿತು ಮಾತನಾಡಿದ ಎಕ್ಸಿಸ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಅಮಿತಾಭ್ ಚೌಧರಿ, ಸದೃಢವಾದ ಪಿಂಚಣಿ ವ್ಯವಸ್ಥೆಯುಳ್ಳ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ಈ ಮಹತ್ವದ ಕಾರ್ಯಕ್ರಮದ ಭಾಗವಾಗಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಈ ಉಪಕ್ರಮವು ದೇಶದ ಭವಿಷ್ಯದ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಸಂಪತ್ತು ಸೃಷ್ಟಿಗೆ ರಚನಾತ್ಮಕ ಮತ್ತು ಹೊಂದಿಕೊಳ್ಳುವ ಮಾರ್ಗವನ್ನು ನೀಡುತ್ತದೆ, ಇದರಿಂದಾಗಿ ಆರ್ಥಿಕವಾಗಿ ಚೇತರಿಸಿಕೊಳ್ಳುವ ಸಮಾಜವನ್ನುಪೋಷಿಸುತ್ತದೆ ಎಂದರು.