ದೇವನಾಂಪ್ರಿಯ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ಬಹಳ ಆಕರ್ಷವಾಗಿದ್ದು, ಇಡೀ ಕುಟುಂಬ ಕುಳಿತು ನೋಡುವ ಚಿತ್ರ ಅನ್ನೋದು ಗೊತ್ತಾಗುತ್ತಿದೆ.ದೇವನಾಂಪ್ರಿಯ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ.
ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ `ದೇವನಾಂಪ್ರಿಯ’ ಸಿನಿಮಾ ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬರಲಿದೆ.
ಹಿರಿಯ ನಟಿ ಉಮಾಶ್ರೀ. ತಾರಾ ಅನುರಾಧಾ, ಚರಣ್ ರಾಜ್, ವೀಣಾ ಸುಂದರ್, ಧರ್ಮ, ತಬಲಾ ನಾಣಿ, ರವಿಶಂಕರ್ ಸೇರಿದಂತೆ ಮತ್ತಿತರರು ತಾರಾಬಳಗ ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಚಿತ್ರಕ್ಕಿದೆ.