ಬೆಂಗಳೂರು: ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು
ಸಂಜೆ ಅಂತ್ಯಗೊಳ್ಳಲಿದ್ದು, ಮತದಾರರು ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರವನ್ನು ಗಮನಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮತದಾನದ ವೇಳೆ ತಮ್ಮ ನಿರ್ಧಾರವನ್ನು ಮತಪೆಟ್ಟಿಗೆಗೆ ತುಂಬಲಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿರುವ ಅವರು, ಇದಾಗಲೇ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಸಿಎಂ ಸಚಿವರು ಸೇರಿದಂತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ಆಡಳಿತ ನೀತಿ ಬಗ್ಗೆ ಜನರಲ್ಲಿ ಮುಟ್ಟಿಸಿದ್ದಾರೆ. ಇದೆಲ್ಲಾದರ ನಡುವೆ ಅನವಶ್ಯಕ ಮಾತುಗಳು ನಡೆದಿವೆ. ಮತದಾರ ಎಲ್ಲವನ್ನೂ ಗಮನಿಸಿದ್ದಾನೆ. ನಾಡಿದ್ದು ಮತ ಚಲಾಯಿಸುವ ದಿವಸ. ಇಂದು ಅಧಿಕೃತವಾಗಿ ಬಹಿರಂಗ ಪ್ರಚಾರ ನಿಲ್ಲುತ್ತದೆ. ಅದರ ಜೊತೆಗೆ ಒಬ್ಬರಿಗೆ ಒಬ್ಬರು ಬೈಯುವುದು ನಿಲ್ಲುತ್ತದೆ ಎಂದಿದ್ದಾರೆ.
ಗೃಹಲಕ್ಷಿ÷್ಮ ಯೋಜನೆ ಸ್ಥಗಿತವಾಗಲಿದೆ ಎಂಬ ದೇವೇಗೌಡರ ಹೇಳಿಕೆ ವಿಚಾರಕ್ಕೆ ಸಂಬAಧಪಟ್ಟAತೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಹಿರಿಯ ರಾಜಕಾರಣಿ. ಸ್ವಲ್ಪ ಮಾಹಿತಿ ಕೊರತೆ ಇರಬಹುದು ಅನ್ಸುತ್ತೆ. ಜಮೀರ್ ವಿರುದ್ದ ಕ್ರಮಕ್ಕೆ ರಾಜ್ಯಪಾಲರ ಪತ್ರ ವಿಚಾರಕ್ಕೆ ಸಂಬAಧಪಟ್ಟAತೆ ಅದರ ಬಗ್ಗೆ ಗೊತ್ತಿಲ್ಲ ಎಂದರು.