ಬೆಂಗಳೂರು: ಡಾಕ್ಟರ್ ಬಾಬು ಜಗಜೀವನ್ ರಾಮ್ ಸಂಶೋಧನ ಮತ್ತು ತರಬೇತಿ ಸಂಸ್ಥೆಯ ಕಟ್ಟಡದ ಉದ್ಘಾಟನೆಗೆ ಡಾಕ್ಟರ್ ಎಲ್ ಹನುಮಂತಯ್ಯ ನವರನ್ನು ಆಹ್ವಾನಿಸದೆ ನಿರ್ಲಕ್ಷಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೇಶವಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾದಿಗ ಸಮುದಾಯದ ರಾಜಕೀಯ ಮುತ್ಸದಿಗಳು ಬುದ್ದಿಜೀವಿಗಳು ಮತ್ತು ಸಾಹಿತಿಗಳಾದ…ಡಾ. ಎಲ್ ಹನುಮಂತಯ್ಯ ರವರನ್ನು ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ್ ಮತ್ತು ಡಾ ಸಿದ್ದಲಿಂಗಯ್ಯನವರ ಸಮಕಾಲೀನರ ಸ್ಥಾನದಲ್ಲಿ ಮಾದಿಗ ಸಮುದಾಯವು ಅವರನ್ನು ಗೌರವಿಸುತ್ತಿದೆ ಅವರನ್ನು ನಿರ್ಲಕ್ಷ ಧೋರಣೆಯಿಂದ ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ನಡವಳಿಕೆಯಲ್ಲಿ ಕುತಂತ್ರ ಅಡಗಿದೆ.
ಡಾಕ್ಟರ್ ಎಲ್ ಹನುಮಂತಯ್ಯ ನವರು ಸನ್ಮಾನಿತರಾಗುವುದಕ್ಕೆ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ ಸಂಪುಟಗಳನ್ನು ಕನ್ನಡಕ್ಕೆ ತರಲು ಕಾರಣಕರ್ತರೇ ಅವರು ಎಂದಿದ್ದು, ಅವರನ್ನು ನಿರ್ಲಕ್ಷಿಸಿರುವುದಕ್ಕೆ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟವೂ ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.