ಬೆಂಗಳೂರು: ಎಸ್ಆರ್ಎಸ್ ಗ್ರೂಪ್ ಆಪ್ ಇನ್ಸ್ಟಿಟ್ಯೂಷನ್ನ “ವಿಸುಯಲ್ಸ್ ಫಿಯಸ್ತಾ” ವಾರ್ಷಿಕೋತ್ಸವ ಕಾರ್ಯಕ್ರಮ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಿತು.
“ವಿಸುಯಲ್ಸ್ ಫಿಯಸ್ತಾ” ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಲೇಶ್ವರಂನ ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಘಚಂದ್ರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಮಿಸ್ .ಅನುಶ್ರೀ, ಮಿಸ್ಟರ್ ಶೈನ್ ಶೆಟ್ಟಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಲ್ಲರ ಗಮನ ಸಳೆದರು.
ಐದನೇ ತರಗತಿಯ ಮಕ್ಕಳ ಸಂತಾಪದ ನೃತ್ಯ,ಎಂಟನೇ ತರಗತಿ ವಿದ್ಯಾರ್ಥಿಗಳ ಬುಡಕಟ್ಟು ನೃತ್ಯ, ಆರನೇ ಮತ್ತು ಏಳನೇ ತರಗತಿಯ ಬಾಲಕರ ರಾಜ ಸಂಸ್ಥಾನದ ನೃತ್ಯ, ಎಂಟು ಮತ್ತು ಒಂಬತ್ತನೇ ತರಗತಿ ಬಾಲಕರ ಅವತಾರ ನೃತ್ಯ, 10ನೇ ತರಗತಿ ಮಕ್ಕಳ ರಹಸ್ಯ ನೃತ್ಯಗಳು ನೋಡುಗರ ಮನಸೆಳೆದವು.
ಕಾರ್ಯಕ್ರಮದಲ್ಲಿ ಬೋದಕ ಸಿಬ್ಬಂದಿಗಳಾದ ಉರ್ಮಿಳಾ, ನೀತು, ಇತಾರ್ಥ,ಚೈತ್ರ, ಮತ್ತಿತರರು ಭಾಗವಹಿಸಿದ್ದರು.