ತಿಪಟೂರು: ಆದಿ ಜಾಂಬವ ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘ( ನಿ) ತಿಪಟೂರು ಮತ್ತು ತುರುವೇಕೆರೆ ಸಂಘದವತಿಯಿಂದ ನಡೆದ 10ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 80% ಅಂಕಗಳಿಗಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಪತ್ರಕರ್ತರಿಗೆ ಸನ್ಮಾನವನ್ನು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಭೆಗೆ ಸಂಘದ ಅಧ್ಯಕ್ಷರಾದ ಮಹದೇವ ಎಂಎಸ್, ಮುಖ್ಯ ಅತಿಥಿಗಳಾಗಿ ಡಾ!ಲಕ್ಷ್ಮಿಕಾಂತ್ ಸೂರ್ಯ ಆಸ್ಪತ್ರೆ ತುಮಕೂರು ಆಗಮಿಸಿದ್ದರು, ಇವರು ಈ ಸಂದರ್ಭದಲ್ಲಿ ಮಾತನಾಡಿ ದಲಿತ ಸಮುದಾಯದ ಪೋಷಕರು ಮಕ್ಕಳಿಗೆ ಮೊದಲು ಶಿಕ್ಷಣವನ್ನು ನೀಡಬೇಕು, ಶಿಕ್ಷಣದಿಂದ ಸರ್ವವನ್ನು ಸಾಧಿಸಲು ಸಾಧ್ಯ ಪ್ರಥಮ ಆದ್ಯತೆ ಶಿಕ್ಷಣವಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷರಾದ ಮಹದೇವ ಎಂಎಸ್ ಮಾತನಾಡಿ ಈಗಾಗಲೇ ನಮ್ಮ ಸಂಘದ ವತಿಯಿಂದ 800 ಶೇರುದಾರರು ಶೇರುಗಳನ್ನು ಹಾಕಿದ್ದು ಹಂತ ಹಂತವಾಗಿ ಸಾಲವನ್ನು ನೀಡಿದ್ದೇವೆ ಹಾಗೆ ಮುಂದಿನ ವರ್ಷದೊಳಗೆ ಸಾವಿರ ಶೇರುಗಳನ್ನು ಪೂರೈಸುವುದಾಗಿ ಹೇಳಿದರು ಸಂಘದ ಏಳಿಗೆಗಾಗಿ ಎಲ್ಲಾ ದಲಿತ ಬಾಂಧವರು ಅತಿ ಹೆಚ್ಚು ಶೇರುಗಳನ್ನು ಹಾಕಿ ಸಾಲವನ್ನು ಪಡೆದು ಹಾಗೆ ಮರುಪಾವತಿಸಿ ಸಂಘವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಂತೆ ಕೋರಿದರು.
ಈ ಸಂದರ್ಭದಲ್ಲಿ ಟಿ ರಾಜು ಬೆಣ್ಣೆನಹಳ್ಳಿ ಇವರ ಮಗಳಾದ ಶ್ರುತ ಬಿ ಆರ್ ಇವರು 2023 24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 91% ಅಂಕಗಳಿಸಿದ ಇವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು.ಹಾಗೆ ಇದೇ ಸಂದರ್ಭದಲ್ಲಿ ಇನ್ನುಳಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80% ಗಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸೋಮಶೇಖರ್ ಎಸ್ ಉಪಾಧ್ಯಕ್ಷರು, ನರಸಿಂಹಮೂರ್ತಿ ನಿರ್ದೇಶಕರು, ಧನಂಜಯ ನಿರ್ದೇಶಕರು, ಪಟ್ಟಾಭಿ ರಾಮ ನಿರ್ದೇಶಕರು, ಗೋವಿಂದಯ್ಯ, ಮೈಲಾರಯ್ಯ, ಚಂದ್ರಯ್ಯ, ರಾಜಶೇಖರ್, ಚಂದ್ರಕಲಾ, ಗೌರಮ್ಮ ನಿರ್ದೇಶಕರು, ಹರ್ಷ ತಿಪಟೂರು, ರೋಹಿತ್, ಪತ್ರಕರ್ತರು, ವಿದ್ಯಾರ್ಥಿಗಳ ಪೋಷಕರು, ರಂಗಸ್ವಾಮಿ ಕುಪ್ಪಾಳು, ಶಾಂತಪ್ಪ ಕೊಪ್ಪ, ಟಿ ರಾಜು ಬೆಣ್ಣೇನಹಳ್ಳಿ, ಅಶೋಕ್ ಗೌಡನ ಕಟ್ಟೆ, ತುರುವೇಕೆರೆ ಮತ್ತು ತಿಪಟೂರು ತಾಲೂಕಿನ ಎಲ್ಲಾ ದಲಿತ ಬಾಂಧವರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು