ಬೆಂಗಳೂರು: ವಿಶೇಷ ತನಿಖಾ ತಂಡದ ಪೊಲೀಸರು ಇನ್ಸ್ಪೆಕ್ಟರ್ ಅಯ್ಯಣ್ಣರೆಡ್ಡಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಶಾಸಕ ಮುನಿರತ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಯ್ಯಣ್ಣರೆಡ್ಡಿ ಮುನಿರತ್ನ ಅವರು ಪಾಲ್ಗೊಂಡಿರುವ ಆರೋಪ ಪ್ರಕರಣಗಳಲ್ಲಿ ಅವರು ಸಹ ಭಾಗಿಯಾಗಿದ್ದಾರೆ ಎಂದು ಬಂಧನದಲ್ಲಿರುವ ಅವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಮುನಿರತ್ನ ವಿರುದ್ದದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅಯ್ಯಣ್ಣರೆಡ್ಡಿ ವಿರುದ್ದ ಅಪರಾಧಿಕ ಒಳಸಂಚಲ್ಲಿ ಭಾಗಿ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಅಯ್ಯಣ್ಣರೆಡ್ಡಿ ವಿರುದ್ದ ಕೇಳಿಬಂದಿರುವ ಆರೋಪದ ಕುರಿತಾಗಿ ಪ್ರಶ್ನೆಗಳ ಸುರಿಮಳೆಗೆಯ್ಯಲಾಗುತ್ತಿದೆ.
ಈ ಹಿಂದೆ ಮುನಿರತ್ನ ಅವರು ಪ್ರತಿನಿಧಿಸುವ ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯ ಪೀಣ್ಯಾ, ಜಾಲಹಳ್ಳಿ, ರಾಜಗೋಪಾಲನಗರ, ಯಶವಂತಪುರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಅಯ್ಯಣ್ಣ ರೆಡ್ಡಿ ಕಾರ್ಯನಿರ್ವಹಿಸಿದ್ದರು.
ಕಳೆದ ಒಂದೂವರೆ ವರ್ಷದಿಂದ ಹೆಬ್ಬಗೋಡಿ ಇನ್ಸ್ಪೆಕ್ಟರ್ ಆಗಿ ಅಯ್ಯಣ್ಣರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಸಕರು ಹಾಗೂ ಅವರ ಕಡೆಯವರಿಗೆ ಬೇಕಾದವರ ಸಿಡಿಆರ್ ತೆಗೆಸಿರುವ ಆರೋಪ. ಶಾಸಕರ ಪ್ರಭಾವಕ್ಕೆ ಒಳಗಾಗಿ ಕಾನೂನುಬಾಹಿರ ಚಟುವಟಿಕೆಗೆ ಕಾನೂನು ದುರ್ಬಳಕೆ ಆರೋಪ. ಅಲ್ಲದೇ ಶಾಸಕರ ವಿರೋಧಿ ಬಳಗದ ವಿರುದ್ದ ದೂರು ದಾಖಲಿಸುವ ವೇಳೆ ಅಯ್ಯಣ್ಣರೆಡ್ಡಿ ಅಣತಿಯಂತೆ ಹಲವರು ದೂರು ದಾಖಲಿಸಿರುವ ಆರೋಪವಿದೆ.
ಕಳೆದ ಏಳೆಂಟು ವರ್ಷಗಳಿಂದ ಮುನಿರತ್ನ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ಅಯ್ಯಣ್ಣರೆಡ್ಡಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಕಬ್ಬನ್ ಪಾರ್ಕ್, ಪೀಣ್ಯಾ, ರಾಜಗೋಪಾಲನಗರ, ಯಶವಂತಪುರ, ಜಾಲಹಳ್ಳಿ ಠಾಣೆಯ ಪ್ರಮುಖ ಹಿಂದಿನ ಕೇಸ್ ಗಳ ಬಗ್ಗೆಯೂ ಮಾಹಿತಿ ಕಲೆಹಾಕ್ತಿರುವ ತನಿಖಾ ತಂಡ.
ರಾಜಕಾರಣಿಗಳ ವಿರುದ್ದ ಕೇಳಿಬಂದಿದ್ದ ಆರೋಪ ದಾಖಲಾಗಿದ್ದ ದೂರುಗಳಲ್ಲಿ ಅಯ್ಯಣ್ಣರೆಡ್ಡಿ ತನಿಖಾಧಿಕಾರಿಯಾಗಿದ್ದ ಪ್ರಕರಣಗಳ ಬಗ್ಗೆ ಎಸ್ಐಟಿ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಲಾಗಿದೆ.
ಎಸ್ಐಟಿಯಿಂದ ಅಯ್ಯಣ್ಣರೆಡ್ಡಿ ತೀವ್ರ ವಿಚಾರಣೆ
