ಬೊಮ್ಮನಹಳ್ಳಿ: ಸಂವಿಧಾನ ಪುಸ್ತಕ ಓದಿ ಪ್ರಜಾಪ್ರಭುತ್ವ ಯಶಸ್ವಿಗೊಳಿಸಿ , ದೇಶಭಕ್ತರಾಗಿ ಬಾಳಬೇಕು ಎಂಬುದಾಗಿ ದಲಿತ ಸಂಘರ್ಷ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎ.ಗೋಪಾಲ್ ತಿಳಿಸಿದರು.
ಅವರು ಬೊಮ್ಮನಹಳ್ಳಿ ಕ್ಷೇತ್ರದ ಬಸವಾಪುರ ದಲ್ಲಿ ದಲಿತ ಸಂಘರ್ಷ ಸೇನೆವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಓದು ಪುಸ್ತಕ ವಿತರಣೆ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ರವರ ಬೆಳ್ಳಿ ರಥ ಹಾಗೂ ಬೀಮಾ ಜ್ಯೋತಿ ತಮಟೆ ವಾದ್ಯಗಳೊಂದಿಗೆ ಬೃಹತ್ ಜನ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನವು ನಮ್ಮ ರಕ್ಷಣೆಯ ಕವಚವಾಗಿದ್ದು ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಮನುಷ್ಯರಾಗಿ ಬದುಕುವುದ ಕಲಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಅದ್ದೂರಿಯಾಗಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಬೆಳ್ಳಿ ರಥ ಹಾಗೂ ಬೀಮಾ ಜ್ಯೋತಿ ತಮಟೆ ವಾದ್ಯಗಳೊಂದಿಗೆ ಬೃಹತ್ ಜನ ಜಾಗೃತಿ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಣೆಮಾಡಲಾಯಿತು ಸಿಹಿ ಹಾಗೂ ಅನ್ನದಾನ ವಿತರಣೆ..ದಲಿತ ಸಂಘರ್ಷ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾ ಎ.ಗೋಪಾಲ್, ಬಸಾಪುರ ಗ್ರಾಮದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಹತ್ತಿರ , ಹೈಕೋರ್ಟ್ ವಕೀಲರಾದ ರಮೇಶ್ ಪಿ.ಎಲ್.ರಾಜ್ಯ ಕಾರ್ಯಾಧ್ಯಕ್ಷರು ಭದ್ರಯ್ಯ, ಬೆಂಗಳೂರು ಜಿಲ್ಲೆ ಮಹಿಳಾ ಸಂಘಟನೆ ಅಧ್ಯಕ್ಷರಾದ ನಿರ್ಮಲ, ರಾಧ.ಐಷಾ, ಆಶಾ, ಸಲ್ಮಾ, ಮಾದಮ್ಮ, ಶಕೀಲಾ, ಆನೇಕಲ್ ತಾಲ್ಲೂಕು ಅಧ್ಯಕ್ಷರಾದ ಜೆ.ಮುರುಗೇಶ್, ಉಪಾಧ್ಯಕ್ಷ ದೇವರಾಜ್, ಉಮಾಶಂಕರ್, ನಾಗರಾಜ್, ನಾಗಪ್ಪ, ಅಂಬರೀಶ್, ಆನೇಕಲ್ ತಾಲ್ಲೂಕಿನ ಕಾರ್ಯಾಧ್ಯಕ್ಷ ರಾಜಪ್ಪ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲಾಕ್ಷ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಮುಖಂಡರಾದ ನಾರಾಯಣಪ್ಪ, ಪಿ.ರವಿಕುಮಾರ್, ಸಂತೋಷ್ಕುಮರ, ಶಿವಕುಮಾರ್, ಇಲಿಯಾಜ್, ಬಸಾಪುರ ಮುಖಂಡರಾದ ಶಂಕರ್.ನಾರಾಯಪ್ಪ, ಇನ್ನೂ ಮುಂತಾದ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.