ಬೆಂಗಳೂರು ಡಿಸೆಂಬರ್ 11; ಶ್ರೀ ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಏಪ್ರಿಲ್ 14ರಂದು ವಿಜಯನಗರದ ಆದಿಚುಂಚನ ಗಿರಿ ಸಮುದಾಯ ಭವನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳಲಾಗಿದೆ ಎಂದು ಜಾಗೃತಿ ಟ್ರಸ್ಟ್ ನ ಅಧ್ಯಕ್ಷರಾದ ಆರ್.ಮಂಜುನಾಥ್ , ಮಡಿವಾಳ ಜನಾಂಗದ ರಾಜ್ಯಾಧ್ಯಕ್ಷರಾದ ರಂಗಪ್ಪ ತಿಳಿಸಿದರು.
ಪ್ರೆಸ್ ಕ್ಲಬ್ ಆಪ್ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದರಾಜನಗರ ವಿಜಯನಗರ ಮಡಿವಾಳರ ಜಾಗೃತಿ ವೇದಿಕೆಯ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆದಿಚುಂಚನ ಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ, ಮೂಡಬಿದರೆಯ ಮುಕ್ತಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿವಾಹವಾಗುವ ಜೋಡಿಗಳು ಮಡಿವಾಳ ಸಂಘದ ಅಧ್ಯಕ್ಷರಾದ ನಂಜಪ್ಪ ಸೇರಿದಂತೆ ಈ ಕೆಳಕಂಡ ದೂರಾವಾಣಿ ಸಂಪರ್ಕಿಸಬಹುದಾಗಿದೆ, 7892217442,9242882872, 9611989147,9945209072,9886329314,7411944196 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.