ಬೆಂಗಳೂರು: ಬೆಂಗಳೂರಿನಲ್ಲಿ ಟೆಸ್ಟ್ ಬೆಂಚ್ಗಳಿಗಾಗಿ ಪರಿಣಿತಿಕೇಂದ್ರ (ಸಿಒಇ) ಅನ್ನು ಸ್ಥಾಪಿಸುವುದಾಗಿ ಎಂಬಿಡಿಎ ಮತ್ತು ಆಕ್ಸಿಸ್ ಕೇಡ್ಸ್ ಘೋಷಿಸಿವೆ. ಮೇಕ್ ಇನ್ ಇಂಡಿಯಾ ಉಪ
ಕ್ರಮಕ್ಕೆ ನೆರವಾಗಲು ತನ್ನ ವಿಶ್ವಾಸಾರ್ಹ ಪ್ಲಾಟ್ಫಾರಂ ಅನ್ನುಬಳಸಿಕೊಳ್ಳಲು ಸಿಒಇಗೆ ಎಂಬಿಡಿಎ ಅನುವು ಮಾಡಿಕೊಡಲಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಏರೋಸ್ಪೇಸ್ ಪಾರ್ಕ್ನಲ್ಲಿ ಆಕ್ಸಿಸ್ ಕೇಡ್ಸ್ನ ಹೊಸ ಘಟಕದಲ್ಲಿ ಈ ಸಿಒಇ ಅನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಅತ್ಯಾಧುನಿಕ ಟೆಸ್ಟ್ ಬೆಂಚ್ ಲ್ಯಾಬೊರೇಟರಿ, ಎಕ್ವಿಪ್ಮೆಂಟ್, ಸಲಕರಣೆಗಳು, ಸ್ಟೋರ್ಗಳು, ಟೂಲ್ಗಳನ್ನು ಸ್ಥಾಪಿಸಲಾಗುತ್ತದೆ.ಆಕ್ಸಿಸ್ಕೇಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ನ ಚೇರ್ಮನ್ ಡಾ. ಎಸ್ ರವಿನಾರಾಯಣನ್ “ಟೆಸ್ಟ್ ಸೊಲ್ಯೂಶನ್ಸ್ನಲ್ಲಿ ಆಕ್ಸಿಸ್ಕೇಡ್ಸ್ ಉತ್ತಮ ಪರಿಣಿತಿಯನ್ನು ಹೊಂದಿದೆ ಮತ್ತುಟೆಸ್ಟ್ ಸೊಲ್ಯೂಶನ್ಸ್ ವಿಭಾಗದಲ್ಲಿ ನಮ್ಮ ನಾಯಕತ್ವಕ್ಕೆ ಎಂಬಿಡಿಎ
ಜೊತೆಗೆ ಸಿಒಇ ಒಂದು ಮಹತ್ವದ ಹೆಜ್ಜೆಯಾಗಿದೆ.
ಆಕ್ಸಿಸ್ಕೇಡ್ಸ್ ಮಹತ್ವದ ಸ್ಥಾನವನ್ನು ಪಡೆದುಕೊಳ್ಳಲಿದ್ದು, ಎಂಬಿಡಿಎಗೆ ಗಮನಾರ್ಹವಾದ ಆಫ್ಸೆಟ್, ಇಂಡಿಜಿ ನೈಸೇಶನ್ ಮತ್ತು ಮೇಕ್ಇನ್ ಇಂಡಿಯಾ ಪಾಲುದಾರನಾಗಲಿದೆ ಎಂದರು.
ಎಂಬಿಡಿಎ ಹಿರಿಯ ಆಡಳಿತ ಮಂಡಳಿ ತಂಡದ ಘಟಕವನ್ನು ಉದ್ಘಾಟನೆ ಮಾಡಿ ಮಾತನಾಡಿದ ಎಂಬಿಡಿಎ ಎಕ್ಸ್ಪೋರ್ಟ್ ಸೇಲ್ಸ್ ಗ್ರೂಪ್ ಡೈರೆಕ್ಟರ್ ಫ್ಲಾರೆಂಟ್ ಡ್ಯುಲೆಕ್ಸ್ “ಆಕ್ಸಿಸ್ಕೇಡ್ಸ್ ವಿನ್ಯಾಸ ಮಾಡಿದ ಮತ್ತು ಉತ್ಪಾದನೆ ಮಾಡಿದ ಟೆಸ್ಟ್ ಬೆಂಚ್ಗಳ ಬಗ್ಗೆ ಎಂಬಿಡಿಎ ಸಂಪೂರ್ಣವಾಗಿ ಸಂತೃಪ್ತಿ ಹೊಂದಿದೆ. ಟೆಸ್ಟ್ ಬೆಂಚ್ ಸಿಒಇ ಅನ್ನು ಸ್ಥಾಪಿಸಿರುವುದು ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ನಮ್ಮ ಭವಿಷ್ಯದ ಮೇಕ್ ಇನ್ ಇಂಡಿಯಾ ಉದ್ದೇಶಗಳನ್ನು ವೃದ್ಧಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಏರೋ ಇಂಡಿಯಾದ 2025 ರ ಉದ್ಘಾಟನೆ ದಿನದಂದುಗೌರವಯುತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಕೂಡಾ ಕಂಪನಿಯ ಸ್ಟಾಲ್ಗೆ ಭೇಟಿ ನೀಡಿದ್ದರು. ರಕ್ಷಣಾ ಸಚಿವರ
ಭೇಟಿ ಮತ್ತು ಮನ್ನಣೆಯ ಬಗ್ಗೆ ಡಾ. ಸಂಪತ್ ರವಿನಾರಾ ಯಣ ಅವರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.