ಬೆಂಗಳೂರು: ಐಐಎಂ ಸಂಸ್ಥೆಯಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ, ಮೀಸಲಾತಿ ನೀತಿ ಉಲ್ಲಂಘನೆ ಹಾಗೂ ಐಐಎಂ ನಿರ್ದೇಶಕರ ನೀತೊ ಖಂಡಿಸಿ ಒಬಿಸಿ ಫೆಡರೇಶನ್ ಆಪ್ ಇಂಡಿಯಾವತಿಯಿಂದ ಬೆಂಗಳೂರಿನ ಸ್ವಾತಂತ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಒಬಿಸಿ ಫೆಡರೇಶನ್ ಅಧ್ಯಕ್ಷ ಏಂಜೆರಪ್ಪ ಮಾತ ನಾಡಿ, ಐಐಎಂನಲ್ಲಿ ಮೀಸಲಾತಿ ರೋಸ್ಟರ್ ಪದ್ಧತಿ ಅನುಸರಿಸುತ್ತಿಲ್ಲ, ಅಂಬೇಡ್ಕರ್ ಅವರು ಜಾರಿಗೊಳಿಸಿದ ಸಂವಿಧಾನ ಸಂಪೂರ್ಣವಾಗಿ ಜಾರಿ ಞಯಾಗುತ್ತಿಲ್ಲ, ಒಬಿಸಿ ವಿದ್ಯಾರ್ಥಿಗಳು, ಅಧ್ಯಾ ಪಕರು, ಸಿಬ್ಬಂದಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಐಐಎಂ ನಿರ್ದೇಶಕರಾದ ಕೃಷ್ಣನ್ ಅವರು ಸರಿಯಾದ ಮೀಸಲಾತಿ ಅನುಸರಿಸುತ್ತಿಲ್ಲ, ಸಾಕಷ್ಟು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಇವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಂಜಾರ ಮಹಾಸ್ವಾಮಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಒಬಿಸಿ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಕಿರಣ್ ಕುಮಾರ್,ಪ್ರಧಾನ ಕಾರ್ಯದರ್ಶಿ ಬಿ.ಎಂ.ಪವನ್ ಸಿಂಗ್, ಕಾರ್ಯಾಧ್ಯಕ್ಷ ಡಾ.ಕೇಶವ ಪ್ರಸಾದ್, ಉಪಾಧ್ಯಕ್ಷ ಡಾ.ಲೋಕೇಶಪ್ಪ, ಕೆ.ಲಕ್ಷ್ಮಣ್ ಯಾದವ್, ಜಂಟಿ ಕಾರ್ಯದರ್ಶಿ ಮಧುಸೂದನ್ ಇದ್ದರು.