ಬೆಂಗಳೂರು: ಇದೇ 27ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಈ ಭಾರೀ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ,ಜತೆಗೆ ಕಳೆದ ಐದು ವರ್ಷಗಳಲ್ಲಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಗೆಲ್ಲುವ ವಿಶ್ವಾಸ ನನಗಿದೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಹಾಲಿ ಅಭ್ಯರ್ಥಿ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ “ನವ ಮನ್ವಂತರದ ಮುಂದಣ ಹೆಜ್ಹೆ” ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎದುರುಗಡೆ ಅಭ್ಯರ್ಥಿಯ ರೀತಿ ಇದ್ದಕ್ಕಿದ್ದಂತೆ ಚುನಾವಣೆಗೆ ಬಂದು ನಿಂತಿಲ್ಲ, ಈ ಭಾರೀ ಉತ್ತರ ಕರ್ನಾಟಕದ ನೌಕರರಿಗೆ ಆದ್ಯತೆ ನೀಡುವ ಹಿನ್ನಲೆಯಲ್ಲಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಇಲಾಖೆಯ ನಾಗರಾಜ ಆರ್.ಜುಮ್ಮನವರ ಅವರನ್ನು ಕಣಕ್ಕಿಳಿಸಲಾಗಿದೆ, ಸಂಘದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು 27ಕೋಟಿ ರೂಪಾಯಿ ಉಳಿತಾಯ ಮಾಡಿದ್ದೇನೆ, ಹಳೆಯ ಕಟ್ಟಡವನ್ನು ನವೀಕರಿಸಿ ಅತ್ಯುತ್ತಮ ಕಟ್ಟಡ ಕಟ್ಟಿ ನಿಲ್ಲಿಸಿದ್ದೇನೆ, ಬೇರೋಂದು ಜಾಗದಲ್ಲಿ 300 ಕೊಠಡಿಗಳು ಇರುವ ಸಂಕೀರ್ಣ ಕಟ್ಟಡ ಜಾಗ ಕಟ್ಟುವ ಉದ್ದೇಶ ಹೊಂದಲಾಗಿದೆ ಎಂದರು.
ಎನ್ಪಿಎಸ್ ಯೋಜನೆಯನ್ನು 2025ರಲ್ಲಿ ಹೋರಾಟ ನಡೆಸಿ ಜಾರಿ ತರಲು ಅವಿರತ ಪ್ರಯತ್ನ ನಡೆಸಲಾಗುವುದು ಈ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ,ಈಗಾಗಲೇ ನಾವು ಕೊಟ್ಟ ಭರವಸೆಯಂತೆ ಏಳನೇ ವೇತನ ಆಯೋಗ ವೇತನ ಪರಿಷ್ಕರಣೆ ಜಾರಿ ತಂದಿದ್ದೇವೆ. ಶೇ.17ರಷ್ಟು ಮಧ್ಯಂತರ ಪರಿಹಾರ ಭತ್ಯೆಯನ್ನು ಪಡೆದುಕೊಳಲಾಗಿದೆ, ಕೇಂದ್ರ ಸರ್ಕಾರದ 8ನೇ ವೇತನ ಆಯೋಗ ಜಾರಿಯಾದ ತಕ್ಷಣ ರಾಜ್ಯದಲ್ಲೂ ಕೇಂದ್ರ ಮಾದರಿ ವೇತನವನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಅನುಷ್ಠಾನಗೊಳ್ಳದೇ ಬಾಕಿ ಇರುವ ಎಲ್ಲ ಇತರೆ ಭತ್ಯೆಗಳು ಹಾಗೂ ಎರಡನೇ ವರದಿಯ ಶಿಫಾರಸ್ಸುಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು, ಒರಿಸ್ಸಾ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ ಋತುಸ್ರಾವ ವಿಶೇಷ ರಜೆ ಸೌಲಭ್ಯವನ್ನು ಮಂಜೂರು ಮಾಡಿಸಲಾಗುವುದು, ಸರ್ಕಾರಿ ನೌಕರರ ಗಳಿಕೆ ರಜೆಯನ್ನು 300ರಿಂದ 340ಕ್ಕೆ ಏರಿಸಲಾಗುವುದು,ರಾಜ್ಯದಲ್ಲಿ ಜಾರಿಯಲ್ಲಿರುವ ಕೆನೆಪದರ ಆದಾಯದ ಮಿತಿಯನ್ನು ಎಂಟು ಲಕ್ಷದಿಂದ 15ಲಕ್ಷಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ನಮ್ಮ ಪರವಾಗಿ ಹದಿಮೂರು ತಂಡಗಳು ಜಯಗಳಿಸಿದ್ದಾರೆ,
ಈ ಬಾರಿಯೂ ಕೂಡ ಜಯ ನಮ್ಮ ಪರವಾಗಿರಲಿದೆ ಇದರಲ್ಲಿ ಅನುಮಾನವೇ ಬೇಡ, ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್, ಗುರುಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಅವರು ಸಚಿವಾಲಯ ನೌಕರರ ಚುನಾವಣೆಯಲ್ಲಿ ಗೆಲ್ಲುವ ಯೋಗ್ಯತೆ ಅವರಿಗಿಲ್ಲ, ಎನ್.ಪಿ.ಎಸ್ ನೌಕರರ ಹೆಸರೇಳಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಹಾಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೃಷ್ಣೇಗೌಡ ಅವರಿಗೆ ಸಂಘದ ನಾಲ್ಕು ಜನರ ಪರಿಚಯವಿಲ್ಲ, ಸಂಘದ ಇತಿಹಾಸವನ್ನು ಅವರ ಬಾಯಿಂದ ಹೇಳಿಸಲಿ ನಮ್ಮಗೆ ಸಂಘ ಪೂರ್ವಪರ ಇತಿಹಾಸವನ್ನು ಬಲ್ಲೆ, ಇದ್ದಕ್ಕಿದ್ದಂತೆ ಚುನಾವಣೆಗೆ ಬಂದು ನಿಂತಿದ್ದಾರೆ ಎಂದು ಹೇಳಿದರು.