ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಅಚ್ಚರಿಗಳಲ್ಲಿ ಇದೂ ಒಂದು. ಮಾತ್ರವಲ್ಲದ ದಾಖಲೆಯೂ ಹೌದು! 13 ವರ್ಷದ ಈ ಬಾಲಕ 1,1 ಕೋಟಿ ರೂಪಾಯಿಗೆ ಬಿಕರಿಯಾಗಿದ್ದಾನೆ. ಬಿಹಾರ ಮೂಲದ ವೈಭವ್ ಸೂರ್ಯವಂಶಿ ಎಂಬಾತನೇ ಈ ಬಾಲಕ. ಹಲವು ಮಕ್ಕಳು ಕೈಯ್ಯಲ್ಲಿ ಬ್ಯಾಟ್ ಹಿಡಿಯುವ ಹೊತ್ತಿಗಾಗಲೇ ಈತ ಐಪಿಎಲ್ ಫ್ರಾಂಚೈಸಿಯೊಳಗೆ ಜಾಗ ಮಾಡಿಕೊಂಡಿದ್ದಾನೆ.
ಕಳೆದ ಸೆಪ್ಟೆಂಬರ್ ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತಗಳ ನಡುವೆ ನಡೆದ ಯೂತ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಶತಕ ಹೊಡೆದಾಗ ಈತ ಸುದ್ದಿಯಾಗಿದ್ದ.ಬಿಹಾರ ರಾಜ್ಯ ತಂಡದಲ್ಲಿ ಈಗಾಗಲೇ ಸ್ಥಾನ ಗಿಟ್ಟಿಸಿಕೊಂಡಿರುವ ಇನ್ನೂ ಮೀಸೆ ಮೂಡಿರದ ಈ ಬಾಲಕ ಅಂಡರ್ 19 ಭಾರತ ತಂಡದ ಪರ 2 ಯೂಥ್ ಟೆಸ್ಟ್ ಗಳನ್ನು ಆಡಿದ್ದಾನೆ. ಪ್ರಥಮ ದರ್ಜೆ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾನೆ.ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ದಿಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಪೈಪೋಟಿಗೆ ಬಿದ್ದು ರಾಜಸ್ಥಾನ ತಂಡ ಈತನನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ.