ಬೆಂಗಳೂರು: ಹ್ಯುಮಾನಿಟಿ ಫೌಂಡೇಷನ್ನ ಐದು ಮಕ್ಕಳು ಅತ್ಯಪೂರ್ವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಐದು ಮಕ್ಕಳು ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಭೇಟಿ ಮಾಡುವ ಕನಸಿನ ಕ್ಷಣಗಳನ್ನು ಎದುರುಗೊಂಡಿದ್ದು ಮಾತ್ರವಲ್ಲ, ಜೊತೆಗೆ ಭಾರತೀಯ ಕ್ರಿಕೆಟ್ ಆಟಗಾರರ ಜೊತೆ ನೆಟ್ನಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡುವ ಅತ್ಯಪೂರ್ವ ಅವಕಾಶವನ್ನು ಕೂಡ ಗಳಿಸಿಕೊಂಡಿದ್ದಾರೆ.
ಎಸ್ಬಿಐ ಲೈಫ್ ಇನ್ಶೂರೆನ್ಸ್ ಮತ್ತು ಬಿಸಿಸಿಐ ಸಂಸ್ಥೆಗಳು ಜೊತೆಗೂಡಿ ಮೀಟ್ ಆಂಡ್ ಗ್ರೀಟ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆ ಸೌಹಾ
ರ್ದ ಭೇಟಿಯ ಕಾರ್ಯಕ್ರಮದ ಮೂಲಕ ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ನ ಐದು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳು ಭಾರತೀಯ ಕ್ರಿಕೆಟ್ ಆಟಗಾರರನ್ನು ಹತ್ತಿರದಿಂದ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ರಿಂದ ವಿಕೆಟ್ ಕೀಪಿಂಗ್ ಸಲಹೆಗಳನ್ನು ಪಡೆದರು.
ಅದ್ಭುತ ಬೌಲರ್ ಆಗಿರುವ ಅರ್ಶದೀಪ್ ಸಿಂಗ್ ಅವರ ಬೌಲಿಂಗ್ ದಾಳಿಯನ್ನು ಎದುರಿಸಿದರು. ವಿಶೇಷವಾಗಿ ಪ್ರಸ್ತುತ ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಅವರ ಜೊತೆ ಬ್ಯಾಟಿಂಗ್ ಮಾಡುವ ಅಪೂರ್ವ ಅವಕಾಶ ಗಳಿಸಿಕೊಂಡರು.ಈ ಕಾರ್ಯಕ್ರದ ಭಾಗವಾಗಿ ದೀಪಿಕಾ ಎಂ, ಮೈಲಾರಿ ಎನ್, ಅನನ್ಯಾ ವಿ, ನವ ಪ್ರಣವ್ ಮತ್ತು ಪಾವ್ ಗೌಹಾವೊ ಎಲ್ ಐವರು ಮಕ್ಕಳು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವಿನ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ವೀಕ್ಷಿಸುವ ಅಪೂರ್ವ ಅವಕಾಶವನ್ನು ಪಡೆದರು.