ಒಂದು ಪಂದ್ಯದ ಫಲಿತಾಂಶ ರ್ಯಾಂಕಿಂಗ್ ಪಟ್ಟಿಯನ್ನು ಹೇಗೆ ಅಲ್ಲಾಡಿಬಿಡಿಸುತ್ತದೆ ನೋಡಿ! ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡದೆ ನಿರಾಸೆ ಮೂಡಿಸಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಅವರು ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸಹ ಕುಸಿದಿದ್ದಾರೆ.
14ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ 6 ಸ್ಥಾನಗಳಷ್ಟು ಕುಸಿತ ಕಂಡಿದ್ದು ಪ್ರಸ್ತುತ 20 ನೇ ಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ ಪರಿಸ್ಥಿತಿಯಂತೂ ಇನ್ನೂ ಚಿಂತಾಜನಕವಾಗಿದೆ. 26ನೇ ಸ್ಥಾನದಲ್ಲಿದ್ದ ಅವರು 5 ಸ್ಥಾನಗಳಷ್ಟು ಕುಸಿತ ಕಂಡಿದ್ದು 31ಕ್ಕೆ ಇಳಿದಿದ್ದಾರೆ. ಅಡಿಲೇಡ್ ಪಂದ್ಯದಲ್ಲಿ ಶತಕ ಹೊಡೆದೆ ಪಂದ್ಯದ ಗತಿಯನ್ನೇ ಬದಲಿಸಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 6 ಸ್ಥಾನಗಳಷ್ಟು ಏರಿಕೆ ಕಂಡಿದ್ದು 5ನೇ ಸ್ಥಾನಕ್ಕೆ ಏರಿದ್ದಾರೆ.