ನೋಯ್ಡಾ: ಬೆಂಗಳೂರು ಬುಲ್ಸ್ನ ಸೋಲಿನ ಆಟ ಮುಂದುವರಿ ದಿದೆ. ಅತ್ಯಂತ ಪೈಟಿಯಿಂದ ಕೂಡಿದ ಸೋಮವಾರದ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ಅದು ಯು ಮುಂಬಾ ಕೈಯಲ್ಲಿ ಒಂದಂಕದ ಆಘಾತಕ್ಕೆ ಸಿಲುಕಿದೆ. ಮುಂಬಾ 38-37ರಿಂದ ಗೆದ್ದು 4ರಿಂದ ದ್ವಿತೀಯ ಸ್ಥಾನಕ್ಕೆ ನೆಗೆಯಿತು.
ಇದು 11 ಪಂದ್ಯಗಳಲ್ಲಿ ಬುಲ್ಸ್ಗೆ ಎದು ರಾದ 9ನೇ ಸೋಲು. ಯು ಮುಂಬಾ ಇಷ್ಟೇ ಪಂದ್ಯಗಳಿಂದ 7ನೇ ಜಯ ಸಾಧಿಸಿತು. ಮುಂಬಾ ಪರ ರೈಡರ್ ಅಜಿತ್ ಚೌಹಾಣ್ 10, ಬುಲ್ಸ್ ಪರ ನಾಯಕ ಪದ್ಸೀಪ್ ನರ್ವಾಲ್ 10 ಅಂಕ ಗಳಿಸಿದರು.ಅಗ್ರಸ್ಥಾನಿಗೆ ಆಘಾತಮೊದಲ ಪಂದ್ಯದಲ್ಲಿ ಅಗ್ರಸ್ಥಾನಿ ಹರಿಯಾಣ ಸ್ಟೀಲರ್ಗೆ ತೆಲುಗು ಟೈಟಾನ್ಸ್ 49-27 ಅಂಕಗಳಿಂದ ಆಘಾತವಿಕ್ಕಿತು.
ಹರಿಯಾಣ 11 ಪಂದ್ಯಗಳಲ್ಲಿ 3ನೇ ಸೋಲ ನುಭವಿಸಿದರೆ, ಟೈಟಾನ್ಸ್ 10 ಪಂದ್ಯಗಳಲ್ಲಿ 6ನೇ ಗೆಲುವು ಸಾಧಿಸಿತು. ಟೈಟಾನ್ಸ್ ಪರ ರೈಡರ್ ಆಶಿಷ್ ನರ್ವಾಲ್ 11, ನಾಯಕ ವಿಜಯ್ ಮಲಿಕ್ 8 ಅಂಕಗಳೊಂದಿಗೆ ಮಿಂಚಿದರು.