ಬೆಂಗಳೂರು: ಒಂದೇ ವೇದಿಕೆಯ ಮೇಲೆ ವಿವಿಧ ಕಲಾಪ್ರಾಕಾರಗಳನ್ನು ವೀಕ್ಷಿಸುವ ಸುವರ್ಣಾವಕಾಶ ಇಂದು ವೀಕ್ಷಕರಿಗೆ ದೊರಿಕಿದಂತಾಗಿದೆ ಎಂದು ಕಳಭೂಷಿಣಿ ಡಾ ದರ್ಶಿನಿ ಮಂಜುನಾಥ್ ತಿಳಿಸಿದರು.
ಇವರು ನಗರದ ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲಡ್ ಕಲ್ಚರ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಸಮಂತ್ ಫೌಂಡೇಷನ್ ರವರ ಹೃಷ್ಟಿ ಸೆಂಟರ್ ಫಾರ್ ಎಕ್ಸಲೆನ್ಸೀ ಅವರಿಂದ ನಡೆದ ನೃತ್ಯ ನಿರಂಜನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಒಂದೇ ವೇದಿಕೆಯ ಮೇಲೆ ನಮ್ಮ ವಿವಿಧ ಸಾಂಪ್ರದಾಯ ಕಲೆಗಳನ್ನು ಪ್ರದರ್ಶಿಸಲಾಯಿತು.ದೃಷ್ಟಿ ಸ್ಕೂಲ್ ಆಫ್ ಎಕ್ಸಲೆನ್ಸೀ ವಿಧ್ಯಾರ್ಥಿಗಳು ಒಡೆಸ್ಸೀ,ಪ್ರಿಯ ಸಹೋದರೀಯರಿಂದ ಭರತನಾಟ್ಯ,ಶುಭಂ ಶಾಲೆಯ ಮಕ್ಕಳು ಕಥಕ್,ಚಂದ್ರಗುರು ಶಾಲೆಯ ಮಕ್ಕಳು ಕೂಚಿಪೂಡಿ, ಸಮೃದ್ದೀ ಜಾನಪದ ಕಲಾ ಸಂಸ್ಥೆಯವರಿಂದ ಜಾನಪದ ನೃತ್ಯಗಳು,ಕಲಾಕದಮ ಆರ್ಟ್ ಸೆಂಟರ್ ವಿಧ್ಯಾರ್ಥಿಗಳು ಯಕ್ಷಗಾನವನ್ನು ಪ್ರದರ್ಶಿಸಿದರು.
ಇನ್ನೋರ್ವ ಅತಿಥಿ ಸ್ನೇಹ ಮಿಲನದ ದೀಪಾ ಅಯ್ಯಂಗಾರ್ ಮಾತನಾಡಿ ವಿವಿಧ ನೃತ್ಯ ಶಾಲೆಗಳ ವಿಧ್ಯಾರ್ಥಿಗಳು ಇಂದು ಉತ್ತಮ ಪ್ರದರ್ಶನ ನೀಡಿದ್ದಾರೆ.ವಿವಿಧ ಕಲೆಗಳ ವಿಧ್ಯಾರ್ಥಿಗಳ ಮಧ್ಯ ಉತ್ತಮ ಸ್ನೇಹ ಢರ್ಪಟ್ಟಿದಂತಾಗಿದೆ ಎಂದರು.ಪ್ರಿಯ ಸಿಸ್ಟರ್ಸ್ ಸಹೋದರೀಯರ ಭರತನಾಟ್ಯ ಪ್ರದರ್ಶನ ಸಭಿಕರ ಮನಸೂರಗೊಂಡಿತು.
ಕಾರ್ಯಕ್ರಮದಲ್ಲಿ ಕ್ಯಾಪ್ಟ್ನ್ ಡಾ ಸುರೇಶ್ ರಾಘವ್,ಸುಧೀಂದ್ರ ಮುಂತಾದವರು ಭಾಗವಹಿಸಿದ್ದರು.