ಯಲಹಂಕ: ಹುಸ್ಕೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಬಹುಶಃ ರಾಜ್ಯದಲ್ಲಿಯೇ ಮಾದರಿ ಕಟ್ಟಡವೆಂದರೆ ತಪ್ಪಾಗಲಾರದು ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸುವಂತಹ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾಕ್ಟರ್ ಬಿ ರಮೇಶ್ ಮತ್ತವರ ತಂಡಕ್ಕೆ ಅಭಿನಂದನೆಗಳು ಈ ಸುಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಭವ್ಯ ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಗೌರವ ಸಮರ್ಪಣೆ ಮಾಡಿರುವುದು ಸಂತಸದ ವಿಷಯ ಎಂದು ನೂತನ ಹುಸ್ಕೂರು ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಸ್ಪಟಿಕ ಪುರಿ ಮಹಾ ಸಂಸ್ಥಾನ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಮಹಾಸ್ವಾಮಿಗಳು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಶ್ರೀ ನಂಜಾವಧೂತ ಸ್ವಾಮೀಜಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆದಿಚುಂಚನಗಿರಿ ಸಂಸ್ಥಾನದ ಸೌಮ್ಯನಾಥ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.ಬಳಿಕ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್ ಕೆಂಪೇಗೌಡರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ ದೂರ ದೃಷ್ಟಿಯನ್ನು ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ ಎಲ್ಲಾ ಸಮುದಾಯದ ಏಳಿಗೆಗೆ ಪೇಟೆಗಳನ್ನು ನಿರ್ಮಿಸಿ,
ದೇಶದಲ್ಲಿಯೇ ಮಾದರಿ ನಗರವನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಇಂತಹ ಮಹಾನ್ ಪುರುಷರು ನಮ್ಮ ಯಲಹಂಕ ಕ್ಷೇತ್ರದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯ ಸಂಗತಿ ಇಂಥ ಮಹಾನುಭಾವರ ಪ್ರತಿಮೆಯನ್ನು ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾ. ಬಿ.ರಮೇಶ್ ಹಾಗೂ ಅವರ ತಂಡ ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದು ಇದರ ಜೊತೆಗೆ ಸುಸಜ್ಜಿತವಾದ ಎಲ್ಲಾ ಸೇವೆಯನ್ನು ಒಂದೇ ಸೂರಿನಡಿ ನೀಡಬಲ್ಲ ಶಕ್ತಿಕೇಂದ್ರ ಒಂದನ್ನು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನಿರ್ಮಿಸಿರುವುದು ನಮ್ಮ ಕ್ಷೇತ್ರಕ್ಕೆ ಮುಕುಟವಿದ್ದಂತೆ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹುಸ್ಕೂರು ಗ್ರಾಮ ಪಂಚಾಯಿತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ನನ್ನ ಸಹಕಾರ ಸದಾ ರಮೇಶ ಅವರೊಟ್ಟಿಗೆ ಇರುತ್ತದೆ ಎಂದರು.
ಅಧಿಕಾರ ಶಾಶ್ವತವಲ್ಲ ನಮ್ಮ ಆಡಳಿತ ಅವಧಿಯಲ್ಲಿ ನಮ್ಮ ಕೆಲಸ ಕಾರ್ಯಗಳು ಶಾಶ್ವತವಾಗಿ ನಿಲ್ಲುತ್ತವೆ ಇಂತಹ ಮಾದರಿ ಕಟ್ಟಡ ಹಾಗೂ ಅಂಚೆ ಕಚೇರಿ,ಸಂಜೀವಿನಿ ಭವನ,ಗ್ರಾಮ ಒನ್ ಸೇವಾಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಂಬುಲೆನ್ಸ್, ಬಯಲು ಸಭಾಂಗಣ,ಸಾರ್ವಜನಿಕ ಶೌಚಾಲಯ, ಕೆಂಪೇಗೌಡ ಪ್ರತಿಮೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಕಾರ ನೀಡಿದ ಮಾನ್ಯ ಶಾಸಕರು ಹಾಗೂ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಆಡಳಿತ ವರ್ಗಕ್ಕೆ ಧನ್ಯವಾದಗಳು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ಬಿ.ರಮೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಶ್ರೀನಂಜಾವದೂತ ಸ್ವಾಮೀಜಿ ಶ್ರೀ ಸೋಮನಾಥ ಸ್ವಾಮೀಜಿ ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್, ಹುಸ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೆಂಪಮ್ಮ, ಪಿಡಿಒ ರಾಜೇಶ್, ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.