“ಉತ್ತರ ಪರ್ವ” ಎಂಬ ವಿನೂತನ ಕಾರ್ಯಕ್ರಮದಲ್ಲಿ ಹತ್ತು ಲೇಖಕರ ಕೃತಿಗಳನ್ನು ವೀರಲೋಕ ಪ್ರಕಾಶನವು ಬಿಡುಗಡೆಗೊಳಿಸಿತು.ಉತ್ತರ ಕರ್ನಾಟಕವು ಸಾಹಿತ್ಯ, ಸಂಸ್ಕೃತಿ, ಕಲೆಯಲ್ಲಿ ಸಮೃದ್ಧಿಯನ್ನು ಹೊಂದಿದೆ. ದಕ್ಷಿಣ ಕರ್ನಾಟಕವೂ ಕೂಡ ಅದರಿಂದ ಹೊರತಾಗಿಲ್ಲ. ಸಮಗ್ರ ಕರ್ನಾಟಕದ ಎಲ್ಲರು ಒಟ್ಟಾಗಿ ಸಾಗಬೇಕಾದ ಸಂದರ್ಭವು ಕೂಡ ಇದಾಗಿದೆ.
ಈ ಹಿತ ದೃಷ್ಟಿಯಿಂದ ಉತ್ತರ ಕರ್ನಾಟಕದ ಹಲವು ಬರಹಗಾರರ ಕೃತಿಗಳನ್ನು ದಕ್ಷಿಣ ಕರ್ನಾಟಕದಲ್ಲಿ ಬಿಡುಗಡೆಗೊಳಿಸಬೇಕು, ಬಾಂಧವ್ಯ ಗಟ್ಟಿಯಾಗಬೇಕು, ಅಲ್ಲದೇ ಮುಖ್ಯವಾಗಿ ಕರ್ನಾಟಕದ ಏಕೀಕರಣ ಬೀಜವನ್ನು ಬಿತ್ತಿದವರೇ ಉತ್ತರ ಕರ್ನಾಟಕದ ಹಿರಿಯರೇ ಮೊದಲಿಗರು ಎಂದು ಖ್ಯಾತ ರಂಗಭೂಮಿ ನಟ ಸಿನಿಮಾ ನಿರ್ದೇಶಕ ಬಿ. ಸುರೇಶ್ ತಿಳಿಸಿದರು.
ಸಮಾಜದಲ್ಲಿ ಪುಸ್ತಕಗಳ ಪಾತ್ರ ಬಹಳ ಮಹತ್ವದ್ದು ಅದು ಜೀವನಕ್ಕೆ ಹತ್ತಿರವಾದವು ಎಂದು ಕಥೆ ಗಾರರಾದ ಕರ್ಕಿ ಕೃಷ್ಣಮೂರ್ತಿ ಹೇಳಿ ಪುಸ್ತಕಗಳ ಪ್ರಕಟಣೆಗೆ ಆದ್ಯತೆ ನೀಡಬೇಕೆಂದರು.ವೀರಲೋಕ ಸಂಸ್ಥೆಯ ಪ್ರಕಾಶಕ ವೀರಕ ಪುತ್ರ ಶ್ರೀನಿವಾಸ್,ಸಾಹಿತಿ ರಾಗಂ, ಕಥೆಗಾರ ವೈ.ಏನ್. ಮಧು,ಟಿ ಏನ್ ಸೀತಾರಾಮ್,ಗಿರೀಶ್ ಕಾಸರವಳ್ಳಿ,ವಿಜಿಯಮ್ಮ,ವಸುದೇoದ್ರ, ಶ್ರೀನಿವಾಸ್ ಜಿ ಕಪ್ಪಣ್ಣ, ಹತ್ತು ಪುಸ್ತಕಗಳ ಬರಹಗಾರರು, ಇನ್ನಿತರ ಸಾಹಿತ್ಯ ಬಳಗದವರು ಉಪಸ್ಥಿತರಿದ್ದರು.