ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಕಳೆದೆರಡು ದಿನಗಳ ಹಿಂದೆ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅಲ್ಲಿಂದ ವಾಪಸ್ ಆಗಿದ್ದಾರೆ. ಆದ್ರೆ, ಇದರ ಮಧ್ಯೆಯೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲಾಖೆಯ ಕೆಲಸದ ನೆಪವೊಡ್ಡಿ ದೆಹಲಿಗೆ ತಲುಪಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಇಬ್ಬರು ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಹೀಗೆ ಏಕಾಏಕಿ ಒಬ್ಬರು ವಾಪಸ್ ಆದ ಬಳಿಕ ಇನ್ನೊಬ್ಬರು ದೆಹಲಿಯ ವಿಮಾನ ಏರಿರುವುದು ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.ಅಷ್ಟಕ್ಕೂ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಶತಾಯ ಗತಾಯ ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆದೇ ತೀರಬೇಕು ಎಂಬ ಗುರಿಯಿಟ್ಟುಕೊಂಡಿದ್ದಾರೆ. ಜೊತೆಗೆ 2028 ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಅಕಾಂಕ್ಷಿ ಅಂತಲೂ ಈಗಿನಿಂದಲೇ ಹೇಳುತ್ತಿದ್ದಾರೆ.
ಹೀಗಾಗಿ, ಅವರ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಾಪಸ್ ಆಗಿದ್ದಾರೆ.ಇನ್ನು ಸಚಿವ ಕೆ.ಎನ್.ರಾಜಣ್ಣಸದ್ಯ ದೆಹಲಿ ತಲುಪಿದ್ದು ನಾಳೆ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ.ಈಗಾಗಲೇ ರಾಜಣ್ಣ ಕೂಡ ನೇರವಾಗಿ ಸತೀಶ್ ಜಾರಕಿಹೊಳಿ ಅಧ್ಯಕ್ಷರಾದ್ರೆ ನಮದೇನು ತಕರಾರು ಇಲ್ಲ ಎಂದಿದ್ದು, ಒಬ್ಬರು ವಾಪಸ್ ಆಗುತ್ತಿದ್ದಂತೆ ಇನ್ನೊಬ್ಬರು ದೆಹಲಿಯ ಫ್ಲೈಟ್ ಹತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.