ತುಮಕೂರು: ಕಳೆದ ಮೇ.18, 2023 ದೆಹಲಿಯಲ್ಲಿ ಪಕ್ಷದ ವರಿಷ್ಠರು ಪ್ರೆಸ್ ನೋಟ್ ರಿಲೀಸ್ ಮಾಡಿದ್ದರು, ರಿಲೀಸ್ ಮಾಡಿರೋದನ್ನ ಅವರ ಗಮನಕ್ಕೆ ತಂದಿದ್ದೇನೆ ಎಂದು ಸಹಕಾರ ಸಚಿವ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿರುವ ಅವರು, ಒನ್ ಮ್ಯಾನ್ ಒನ್ ಪೋಸ್ಟ್ ಒಪ್ಪುತ್ತೇನೆ. ಮಂತ್ರಿಸ್ಥಾನ ಬಿಡುತ್ತೇನೆ ಅಧ್ಯಕ್ಷಗಿರಿ ಒಪ್ತೀನಿ ಎಂದು ಹೇಳಿದ್ದಾರೆ. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ ಅವರು, ಶೋಷಿತರ ಸಮಾವೇಶ ರಾಜಕೀಯ ಪಕ್ಷ ಮಾಡುವುದು ಸರ್ವೆ ಸಾಮಾನ್ಯ ಎಂದಿದ್ದಾರೆ.
ನಾವು ಶೋಷಿತರ ಸಮಾವೇಶವನ್ನು ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಎಲ್ಲಾದರೂ ಒಂದು ಕಡೆ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇದಕ್ಕೆ ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ. ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರನ್ನು ಕರೆಸುತ್ತೇವೆ. ರಾಹುಲ್ ಗಾಂಧಿಯವರನ್ನು ಕರೆಸುತ್ತೇವೆ. ಸಿಎಂ, ಡಿಸಿಎಂಗೂ ಕರೆಯುತ್ತೇವೆ. ಹೈಕಮಾಂಡ್ ಒಪ್ಪಿಸಿಯೇ ಮಾಡುತ್ತೇವೆ ಎಂದಿರುವ ಅವರು, ಹಾಸನ ಜಿಲ್ಲೆ ಉಸ್ತುವಾರಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತದೆ.
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಹೈಕಮಾಂಡ್ ಗೂ ಮನವಿ ಮಾಡಿದ್ದೇನೆ. ಬಿಜೆಪಿ ಪಾರ್ಟಿಗೆ ಯಡಿಯೂರಪ್ಪ ಬಲ, ದಳಕ್ಕೆ ದೇವೇಗೌಡ ಹಾಗೇಯೇ ಕಾಂಗ್ರೆಸ್ಗೆ ಸಿದ್ದರಾಮಯ್ಯ ಬಲ ಎಂದಿದ್ದಾರೆ.ದೇವರಾಜ್ ಅರಸು ಅವರು ಏಳು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು, ಅವರ ದಾಖಲೆಯನ್ನು 2025 ಡಿಸೆಂಬರ್ಗೆ ಸಿದ್ದರಾಮಯ್ಯ ಸರಿಗಟ್ಟುತ್ತಾರೆ ಎಂದು ತಿಳಿಸಿದ್ದಾರೆ.
ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿಲ್ಲ. ಕ್ಯಾಬೆನೆಟ್ನಲ್ಲಿ ಬಿಡುಗಡೆ ಮಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕು ಎಂದು ಕೊಂಡಿದ್ದೇವೆ ಎಂದರು.ಚಾಮರಾಜನಗರದಲ್ಲಿ ಕ್ಯಾಬೆನೆಟ್ ನಡೆಸಬೇಕು ಎಂದು ಕೊಂಡಿದ್ದೇವೆ. ಅಲ್ಲಿ ಅದರ ಬಗ್ಗೆ ಚರ್ಚೆ ನಡೆಯುತ್ತದೆ. ಒಳಮೀಸಲಾತಿಗೆ ನಮ್ಮ ಪಕ್ಷ ಬದ್ಧವಾಗಿದೆ. ಜಾತಿಗಣತಿ ವರದಿ ಬಗ್ಗೆ ಸಾಧಕ-ಭಾದಕ ನೋಡಬೇಕು. ಅದಕ್ಕೋಸ್ಕರ ಸ್ವಲ್ಪ ವಿಳಂಬವಾಗಿದೆ ಎಂದಿದ್ದಾರೆ.