ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 20 ಕಿ.ಮೀ. ರೇಸ್ ವಾಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತೀಯ ಅತ್ಲೀಟ್ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದು, ವಿಕಾಸ್ ಸಿಂಗ್ ಪುರುಷರ ಸ್ಪರ್ಧೆಯಲ್ಲಿ 30ನೇ ಸ್ಥಾನ ಪಡೆದು ಗಮನ ಸೆಳೆದರು.
2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಪ್ರಿಯಾಂಕಾ ಗೋಸ್ವಾಮಿ 45 ಸ್ಪರ್ಧಿಗಳಿದ್ದ ಮಹಿಳೆಯರ 20 ಕಿ.ಮೀ.ರೇಸ್ ವಾಕ್ನಲ್ಲಿ 41ನೇ ಸ್ಥಾನ ಪಡೆದರು. ಪ್ರಿಯಾಂಕಾ 1:39:55 ಸೆಕೆಂಡ್ನಲ್ಲಿ ಗುರಿ ತಲುಪಿದರು. ಪ್ರಿಯಾಂಕಾ ಟೋಕಿಯೊ ಗೇಮ್ಸ್ನಲ್ಲಿ 17ನೇ ಸ್ಥಾನ ಪಡೆದಿದ್ದರು. ಚೀನಾದ ಯಾಂಗ್ ಜಿಯಾಯು(1:25:54)ಚಿನ್ನದ ಪದಕ ಜಯಿಸಿದರು. ಸ್ಪೇನ್ನ ವಿಶ್ವ ಚಾಂಪಿಯನ್ ಮರಿಯಾ ಪೆರೆಝ್(1:26:19) ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಸ್ಟ್ರೇಲಿಯದ ಜೆಮಿಮಾ ಮೊಂಟಾಗ್(1:26:25)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.
ಪುರುಷರ 20 ಕಿ.ಮೀ ರೇಸ್ವಾಕ್ನಲ್ಲಿ ಅಕ್ಷದೀಪ್ ಸಿಂಗ್ 6 ಕಿ.ಮೀ.ದೂರ ಕ್ರಮಿಸಿ ಸ್ಪರ್ಧೆಯಿಂದ ಹೊರ ನಡೆದರು. ವಿಕಾಸ್ 1:22:36 ಸೆಕೆಂಡ್ನಲ್ಲಿ ಗುರಿ ತಲುಪಿ 30ನೇ ಸ್ಥಾನ ಪಡೆದರು. ಪರಮ್ಜೀತ್ ಸಿಂಗ್ ಬಿಶ್ತ್(1:23:48) 49 ಸ್ಪರ್ಧಿಗಳ ಪೈಕಿ 37ನೇ ಸ್ಥಾನ ಪಡೆದರು. ಪ್ರಿಯಾಂಕಾ ಗೋಸ್ವಾಮಿ ಆಗಸ್ಟ್ 7ರಂದು ನಡೆಯಲಿರುವ ಮ್ಯಾರಥಾನ್ನಲ್ಲಿ ಸ್ಪರ್ಧಿಸಲಿದ್ದಾರೆ.