ಚಿಕ್ಕಬಳ್ಳಾಪುರ: ಕಳೆದ ಮೂವತ್ತು ವರ್ಷಗಳಿಂದ ಒಳ ಮೀಸಲಾತಿಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಪೀಠ ಒಪ್ಪಿಗೆ ಸೂಚಿಸಿದ್ದು ಕೋರ್ಟ್ ಆದೇಶವನ್ನು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಈ ಹೋರಾಟದಲ್ಲಿ ಮಾದಿಗ ದಂಡೋರ (MRPS) ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಮಂದ ಕೃಷ್ಣ ಮಾದಿಗ ನಿರಂತರವಾಗಿ ತೊಡಗಿಸಿ ಹಿಂದೆ ಸರಿದಂತೆ ದಟ್ಟವಾಗಿ ನಿಂತಿದ್ದರು.
ನಮ್ಮ ರಾಜ್ಯದಿಂದ ಅವರಿಗೆ ಶುಭಾಶಯಗಳು ತಿಳಿಸುತ್ತೇವೆ ಎಂದು ಮಾದಿಗ ದಂಡೋರ (MRPS) ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಹೇಳಿದರು.ಇಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಒಳ ಮೀಸಲಾತಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿ ವಿಜಯೋ
ತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಳ ಮೀಸಲಾತಿ ವರ್ಗೀಕರಣ ಸಂಭಂದ ಪಟ್ಟಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ನಮ್ಮ ಹತ್ತಾರು ವರ್ಷಗಳಿಂದ ನಡೆದ ಬಂದ ಹೋರಾಟಕ್ಕೆ ಜಯ, ಆಯಾ ರಾಜ್ಯಗಳಿಗೆ ಮೀಸಲಾತಿ ವರ್ಗೀಕರಣ ಜಾತಿ ವಾರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೂಡಬಹುದು ಎಂಬ ಆದೇಶ ಇದು ಮಾದಿಗ ದಂಡೋರ ಹೋರಾಟಕ್ಕೆ ಸಿಕ್ಕ ಜಯ ಎಂದರು.
ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ರವರು ನಿರಂತರವಾಗಿ ಒಳ ಮೀಸಲಾತಿ ಬಗ್ಗೆ ಹೊರಾಟಗಳು ಮಾಡುತ್ತ ಬಂದಿದ್ದು ಹೋರಾಟದಲ್ಲಿ ಬಂದ ಅಡಚಣೆಗಳನ್ನ ದಟ್ಟವಾಗಿ ಎದುರಿಸಿ ನಿರಂತರವಾಗಿ ಒಳ ಮೀಸಲಾತಿಗೆ ಹೋರಾಟ ನಡೆಸಿದ್ದರು. ರಾಜ್ಯದಿಂದ ಅವರಿಗೆ ಗೌರವ ಪೊರ್ವ ಶುಭಾಶಯಗಳು ಹಾಗೂ ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾದೀಶರಿಗೆ ಗೌರವಪೂರ್ವಕ ನಮನಗಳು ಸಲ್ಲಿಸುತ್ತೇವೆ ಎಂದರು.
ಮುಖಂಡರಾದ ಮುನಿಕೃಷ್ಣಯ್ಯ ಮಾತನಾಡಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು ಹಾಗೂ ಅವರಿಗೆ ಮೀಸಲಾತಿ ದೊರೆಯಲು ಮಾದಿಗ ದಂಡೋರ ಸಮಿತಿಯಿಂದ ನಿರಂತರವಾಗಿ 30 ವರ್ಷಕ್ಕಿಂತ ಹೆಚ್ಚು ಕಾಲ ಹೋರಾಟಗಳು ನಡೆದಿವೆ ಇದರಲ್ಲಿ ಬಹಳಷ್ಟು ನಿಧನ ಹೊಂದಿದ್ದಾರೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಆಯಾ ರಾಜ್ಯಗಳು ಕೂಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ ಈ ತೀರ್ಪು ನಮ್ಮ ಹೋರಾಟಕ್ಕೆ ಸಿಕ್ಕ ಜಯ ತೀರ್ಪುಗಾರರಿಗೆ ಧನ್ಯವಾದಗಳು ತಿಳಿಸುತ್ತೇವೆ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತಕ್ಷಣ ಕೈಗೆತ್ತಿಕೊಂಡು ಸಚಿವ ಸಂಪುಟದಲ್ಲಿ ತೀರ್ಮಾನ ಕೈ ಗೊಂಡು ಆದಷ್ಟೂ ಬೇಗ ಜಾರಿ ಮಾಡಬೇಕು ಎಂದರು.
ಇನ್ನು ಮಾದಿಗ ದಂಡೋರ (MRPS) ಸಮಿತಿಯ ಪದಾಧಿಕಾರಿಗಳು ಮೊದಲು ನಗರದ ಜೈ ಭೀಮ್ ಹಾಸ್ಟೆಲ್ ಆವರಣದಲ್ಲಿರುವ ಸಂವಿಧಾನ
ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದಲ್ಲದೆ ಮಂದ ಕೃಷ್ಣ ಮಾದಿಗ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಶಿವಣ್ಣ, ಸಮೀತಿಯ ಜಿಲ್ಲಾಧ್ಯಕ್ಷ ರಾಮಕೃಷ್ಣ, ಆಂಜಿ, ಮಾಜಿ ನಗರಸಭಾ ಸದಸ್ಯ ಮುನಿಕೃಷ್ಣ, ಸಿಂಧೂರ್ ತೇಜ, ಎ.ಎನ್ ಮಂಜುನಾಥ, ಲಕ್ಷ್ಮೀನಾರಾಯಣ, ಮುನೀಂದ್ರ, ಗಂಗಾಧರಪ್ಪ, ಕಾಳಪ್ಪ, ಕೊಂಡಪ್ಪ, ಚಿಂತಾಮಣಿ ವೆಂಕಟರಾಯಪ್ಪ ಮತ್ತು ಇತರರು ಇದ್ದರು.