ಓಂಕಾರ್ ಸಾಳ್ವಿ ಅವರು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಫ್ರಾಂಚೈಸಿ ಸೋಮವಾರ ಈ ಘೋಷಣೆ ಮಾಡಿತು.
ಓಂಕಾರ್ ಸಾಳ್ವಿ ಇದಕ್ಕೂ ಮುನ್ನ ಕೋಲ್ಕತಾ ನೈಟ್ರೈಡರ್ ತಂಡದ ಸಹಾಯಕ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದರು.ಕಳೆದ ಸೀಸನ್ನಲ್ಲಿ ಮುಂಬಯಿ ತಂಡದ ರಣಜಿ ಟ್ರೋಫಿ ಹಾಗೂ ಇರಾನಿ ಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಈ ಬಾರಿಯ ರಣಜಿ ಸೀಸನ್ ಮುಗಿದೊಡನೆ ಸಾಳ್ವಿ ಆರ್ಸಿಬಿ ಪಾಳೆಯವನ್ನು ಸೇರಿಕೊಳ್ಳಲಿದ್ದಾರೆ. ಮಾಜಿ ಕ್ರಿಕೆಟಿಗ ಆವಿಷ್ಕಾರ್ ಸಾಳ್ವಿ ಅವರ ಕಿರಿಯ ಸಹೋದರನಾಗಿರುವ ಓಂಕಾರ್ ಸಾಳ್ವಿ ರೈಲ್ವೇಸ್ ಪರ 2005ರಲ್ಲಿ ಕೇವಲ ಒಂದು ಲಿಸ್ಟ್-ಎ ಪಂದ್ಯ ಆಡಿದ್ದರು.