ಮೆಟ್ಜ್ (ಫ್ರಾನ್ಸ್): ಭಾರತದ ಬೊಲ್ಲಿಪಲ್ಲಿ ರಿತ್ವಿಕ್ ಚೌಧರಿ ಮತ್ತು ಅವರ ಜೊತೆಗಾರ ಫ್ರಾನ್ಸಿಸ್ಕೊ ಕ್ಯಾಬ್ರಾಲ್ ಅವರು ಮೊಸೆಲ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೋಡಿಯನ್ನು ಸೋಲಿಸಿ ಸೆಮಿಫೈನಲ್ಗೇರಿದರು.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿತ್ವಿಕ್- ಪೋರ್ಚುಗಲ್ ಆಟಗಾರ ಕ್ಯಾಬ್ರಲ್ ೭-೬ (೧), ೬-೪ ರಿಂದ ಅಗ್ರ ಶ್ರೇಯಾಂಕದ ಗೊನ್ಜಾಲ್ವೆಸ್ (ಮೆಕ್ಸಿಕೊ)- ರೋಜರ್ ವ್ಯಾಸೆಲಿನ್ (ಫ್ರಾನ್ಸ್) ಜೋಡಿಯನ್ನು ಮಣಿಸಿದರು.
ಹೈದರಾಬಾದಿನ ಬೊಲ್ಲಿಪಲ್ಲಿ ರಿತ್ವಿಕ್, ಎಟಿಪಿ ಟೂರ್ನಿಯೊಂದರ ಸೆಮಿಫೈನಲ್ ತಲುಪುತ್ತಿರುವುದು ಇದೇ ಮೊದಲು. ಎಟಿಪಿ ೨೫೦ ಮಟ್ಟದ ಈ ಟೂರ್ನಿಯಲ್ಲಿ ಆಡಿದ್ದ ಭಾರತದ ಇನ್ನಿಬ್ಬರಾದ ಸುಮಿತ್ ನಗಾಲ್ ಮತ್ತು ಎನ್. ಶ್ರೀರಾಮ್ ಬಾಲಾಜಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.