ಮೈಸೂರು: ರಾಜ್ಯದ ಕೆಲ ಮೆಡಿಕಲ್ಶಾಪ್ ಗಳಲ್ಲಿ ಮಾತ್ರೆ ಮೂಲಕ ಡ್ರಗ್ಸ್ಮಾರಾಟ ಮಾಡಲಾಗುತ್ತಿದೆ ಎಂದುಗೃಹ ಸಚಿವ ಜಿ. ಪರಮೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಶಾಪ್’ನಲ್ಲಿ ಮಾತ್ರೆ ಮೂಲಕ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ.ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿದೆ.
ಮಾದಕ ವಸ್ತುಗಳನ್ನು ಸೇಲ್ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಡ್ರಗ್ಸ್ ಮಾರುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.