ಬೆಳಗಾವಿ: ಕಳೆದೆರೆಡು ದಿನಗಳ ಹಿಂದೆ ಬೆಳಗಾವಿಯ ಸಣ್ಣ ಬಾಳೆಕುಂದ್ರಿ ಗ್ರಾಮದ ಬಳಿ ಸಾರಿಗೆ ಬಸ್ ನಿರ್ವಾಹಕ ಮಹಾದೇವಪ್ಪ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧಪಟ್ಟಂತೆ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಹಿಂಪಡೆಯಲಾಗಿದೆ.ಈ ವಿಷಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತಾ ಯಡಾ ಮಾರ್ಟಿನ್ ಸ್ಪಷ್ಟಪಡಿಸಿದ್ದಾರೆ.
ನಿರ್ವಾಹಕ ಮಹಾದೇವಪ್ಪ ವಿರುದ್ಧ ನೀಡಲಾಗಿದ್ದ ದೂರನ್ನು ಸಂತ್ರಸ್ತೆಯ ತಾಯಿ ಹಿಂಪಡೆದಿದ್ದಾರೆ ಎಂದು ಹೇಳಿರುವ ಅವರು, ಕರ್ತವ್ಯ ಲೋಪದಡಿ ಮಾರಿಹಾಳ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜಕಲ್ಯಾಣ ಶೆಟ್ಟಿ ಅವರನ್ನು ಸಿಸಿಆರ್ಬಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಸಿಸಿಆರ್ಬಿ ಇನ್ಸ್ಪೆಕ್ಟರ್ ಮಂಜುನಾಥ್ ನಾಯ್ಕ್ ಅವರನ್ನು ನೇಮಿಸಿರುವುದಾಗಿ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಸಂತ್ರಸ್ತೆಯ ತಾಯಿ ನಿರ್ವಾಹಕರ ಮೇಲಿನ ಪೋಕ್ಸೋ ಪ್ರಕರಣ ಹಿಂಪಡೆದಿರುವ ಬಗ್ಗೆ ನೀಡಿದ ಹೇಳಿಕೆಯ ವಿಡೀಯೋ ತುಣಕನ್ನು ಪ್ರದರ್ಶಿಸಲಾಗಿದೆ.
ತನ್ನ ಮಗ ಹಾಗೂ ಮಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬಸ್ನಲ್ಲಿ ಟಿಕೆಟ್ಗಾಗಿ ಜಗಳ ನಡೆದಿದ್ದು, ಯಾವುದೇ ರೀತಿಯ ಭಾಷಾ ವಿಚಾರಕ್ಕೆ ಜಗಳ ನಡೆದಿಲ್ಲ. ನಾವು ಸಹ ಕನ್ನಡಿಗರಿಗೆ ವಿನಾ ಕಾರಣ ಭಾಷಾ ಹೆಸರಿನಲ್ಲಿ ಅಪಪ್ರಚಾರ ನಡೆದಿರುವುದಾಗಿ ಹೇಳಿರುವ ಆಕೆ ಕೇಸ್ ಅನ್ನು ಹಿಂಪಡೆದಿರುವ ಬಗ್ಗೆ ಅವರು ಸ್ಪಷ್ಟಪಡಿಸಿದ್ದಾರೆ.