ಬೆಂಗಳೂರು/ಹುಬ್ಬಳ್ಳಿ: ನಟಿ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ, ರಾಜ್ಯ ಸರ್ಕಾರದ ಪ್ರಮುಖ ಸಮಾರಂಭಗಳು, ಕನ್ನಡದ ಹಲವು ವಾಹಿನಿಗಳ ಪ್ರಸಿದ್ದ ಕಾರ್ಯಕ್ರಮಗಳ ನಿರೂಪಕಿಯಾಗಿ ಅಸ್ಖಲಿತ ಕನ್ನಡ ಭಾಷೆಯಲ್ಲಿಯೇ ನಿರೂಪಣೆ ಮಾಡುತ್ತ ಕನ್ನಡ ಭಾಷೆಯ ಸೋಗಡನ್ನು ಅತ್ಯಂತ ಸೊಗಸಾಗಿ ಬಳಸಿ ಕನ್ನಡ ನಾಡಿನಾದ್ಯಂತ ಚಿರಪರಿ ಚಿತರಾಗಿದ್ದ ಉದಯೋ ಅನ್ಮುಖ ಕಲಾವಿದೆಯಾಗಿದ್ದ ,
ಅಪರ್ಣಾ ಅವರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಬಸವರಾಜ ಎಸ್. ಹೊರಟ್ಟಿ ಕಂಬನಿ ಮಿಡಿದಿದ್ದಾರೆ. ಅಪ್ರತಿಮ ಪ್ರತಿಭೆ ಹೊಂದಿದ್ದ ಅಪರ್ಣಾ ಬಹು ಬೇಗನೆ ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬಸವರಾಜ ಎಸ್. ಹೊರಟ್ಟಿ ಪ್ರಾರ್ಥಿಸಿದ್ದಾರೆ.



