ಮಾಲೂರು: ಸರ್ಕಾರಿ ಕಚೇರಿಗಳು ಅಂಗಡಿ ಮುಂಗಟ್ಟುಗಳು ಕಾರ್ಖಾನೆ ಉದ್ದಿಮೆಗಳು ಸಾರ್ವಜನಿಕ ವಲಯಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮ ಫಲಕವನ್ನು ಅಳವಡಿ ಸುವುದರ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಎಂ ಎಸ್ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ರಾಜ್ಯ ಅಧ್ಯಕ್ಷ ಟಿ ಎ ನಾರಾಯಣಗೌಡರ ನಾಯಕತ್ವದ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಕಾರ್ಯಕರ್ತರು ಸೋಮವಾರ ತಾಲ್ಲೂಕಿನಾದ್ಯಂತ ಅನ್ಯ ಭಾಷೆಯ ನಾಮಫಲಕ ತೊಲಗಿಸಿ, ಕನ್ನಡ ಭಾಷೆ ನಾಮಫಲಕ ಅಳವಡಿಸಿ ಎಂದು ಹಮ್ಮಿಕೊಂಡಿದ್ದ ಪ್ರತಿಭಟನೆ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು.
ಕನ್ನಡ ನಾಡು ಮತ್ತು ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಕರ್ನಾಟಕ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತಿದ್ದು ಹೊರ ರಾಜ್ಯ ದೇಶಗಳಿಂದ ಕೆಲಸಕ್ಕಾಗಿ ಜನ ವಲಸೆ ಬರುತ್ತಿದ್ದಾರೆ ಪರಭಾಷಿಗರಿoದ ನಮ್ಮ ಮಾತೃ ಭಾಷೆ ಕನ್ನಡ ಮರೆಯಾಗುತಿದೆ ಕೈಗಾರಿಕೆಗಳು ಅಂಗಡಿ ಮುoಗ್ಗಟ್ಟು ಸೇರಿದಂತೆ ಸಾರ್ವಜನಿಕ ವಲಗಳಲ್ಲಿ ಬಹುತೇಕ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಾಮಫಲಕವನ್ನು ಅಳವಡಿಕೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಎನ್ ವಿ ಮುರುಳಿಧರ್ ಉದ್ದೇಶಿಸಿ ಮಾತನಾಡಿದ, ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳಿಂದ ಕನ್ನಡ ಭಾಷೆಯ ನಾಮಫಲಗಳ ಅಳವಡಿಕೆ ಗಾಗಿ ಸತತವಾಗಿ ಹೋರಾಟಮಾಡುತ್ತಾ ಬರುತಿದ್ದು ಕರವೇ ಸಂಘಟನೆಯ ಹೋರಾಟದಿಂದಲೇ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಉಳಿದುಕೊಂಡಿದೆ.
ಕೋಲಾರ ಜಿಲ್ಲೆ ಹಾಗೂ ತಾಲೂಕಿನ ಅಂಗಡಿ ಮುಗಟ್ಟುಗಳು ವಾಣಿಜ್ಯ ಮಳಿಗೆ, ಕೈಗಾರಿಕೆಗಳು ,ವ್ಯಾಪಾರ ಸಂಸ್ಥೆ,ಆಸ್ಪತ್ರೆಗಳು ಪ್ರಯೋಗಾಲಯ, ಹೋಟೆಲ್ಗಳು ಚಿತ್ರ ಮಂದಿರಗಳು ದೇವಾಲಯ,ಮಸೀದಿ ಚರ್ಚ ಗಳ ಮೇಲೆ ಹಾಗೂ ಖಾಸಗಿ ಕoಪನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಜಾಹೀರಾತುಗಳ ನಾಮಫಲಕಗಳಲ್ಲಿ ಬ್ಯಾನರ್ ಗಳಲ್ಲಿ ಕನ್ನಡಭಾಷೆ ಯನ್ನು ಕಡೆಗಣಿಸದೆ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಕನ್ನಡ ಭಾಷೆ ಬಳಕೆಯಾಗುತಿಲ್ಲ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಉದ್ಯಾನ ವನದಲ್ಲಿ ಜಮಯಿಸಿ ಡಾ :ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮೆರವಣಿಗೆ ಮೂಲಕ ಹೊರಟು ಬಾಲಾಜಿ ವೃತ್ತದ ಬಳಿ ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುರಸಭೆ ಅವರಣದಲ್ಲಿನ ಡಾ: ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಪುರಸಭೆಯ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ತಹಸಶೀಲ್ದಾರ್ ಕೆ ರಮೇಶ್ ರವರಿಗೆ ಮನವಿಯನ್ನ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ತಹಸೀಲ್ದಾರ್ ಕೆ. ರಮೇಶ್ ಮಾತನಾಡಿ ಇಂದಿನಿಂದಲೇ ತಾಲ್ಲೂಕಿನ ಎಲ್ಲಾ ಕಚೇರಿ ಅಂಗಡಿ ಸಾರ್ವಜನಿಕ ಸ್ಥಳ ಸೇರಿದಂತೆ ಎಲ್ಲಾ ಕಡೆ ನಾಮಪಲಕವನ್ನುಕನ್ನಡ ಭಾಷೆಯಲ್ಲಿ ಅಳವಡಿಸುವ ಹಾಗೆ ಜಾಗೃತಿ ಮೂಡಿಸಿ ಸಂಬಂಧ ಪಟ್ಟ ಅಧಿಕಾರಿಗಳು ಫಾಲೋಪ್ ಮಾಡುವoತೆ ಸೂಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಎಂ.ಕೆ. ರಾಘವೇಂದ್ರ, ಜಿಲ್ಲಾ ಮಹಿಳಾಧ್ಯಕ್ಷೆ ಲತಾಬಾಯಿ ಮಾಡಿಕ್, ಪುರಸಭಾ ಅಧ್ಯಕ್ಷ ಕೋಮಲ ನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ಎ ರಾಜಪ್ಪ, ಮುಖ್ಯಾಧಿಕಾರಿ ಪ್ರದೀಪ್ ಕುಮಾರ್,ತಾಲೂಕು ಯುವ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್,ನಗರಾದ್ಯಕ್ಷ ಅಧ್ಯಕ್ಷ ಸಿ ಎನ್ ನವೀನ್ ಕುಮಾರ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ರಮಾದೇವಿ ಸಂಘಟಿಕರಾದ ಶಂಕರ್ , ಎಮ್. ಸಿ ರವಿ ಕುಮಾರ್,ಡಿ ಎಮ್ ಸಿ ಚಂದ್ರಶೇಖರ್,ಆನಂದ್ ಯಾದವ್, ರಪಿ,ಜಬಿವುಲ್ಲಾ, ಮಾದೇಗೌಡ, ಗಂಗಾಧರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.