ನೆಲಮಂಗಲ: ಕನಕದಾಸರು ತಮ್ಮ ಕೀರ್ತನೆಗಳು ಮತ್ತು ಕಾವ್ಯಗಳಿಂದ ಇಡೀ ಸಮಾಜವನ್ನು ತಿದ್ದುವ ಶ್ರೇಷ್ಠ ಕಾರ್ಯಗಳನ್ನು ಮಾಡಿದ್ದರು ಎಂದು ನೆಲಮಂಗಲ ವಿಧಾನಸಭಾ ಕ್ಷೆತ್ರ ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಕುರುಬರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ 537ನೇ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಮಾದರಿಯಾಗಿ ಬದುಕುವ ವಿಧಾನವನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿ ಕನಕದಾಸರು ವಿವರಿಸಿದ್ದಾರೆ. ಸಮಾಜದಲ್ಲಿದ್ದ ಮೇಲು ಕೀಳು ಎಂಬ ಪದ್ಧತಿಗಳನ್ನು ಹೋಗಲಾಡಿಸುವುದರ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ ಧೀಮಂತ ಸಂತರಾಗಿದ್ದರು.
16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ತಮ್ಮ ಕೀರ್ತನೆಗಳಿಂದ ಅವರ ಕಾವ್ಯಗಳಲ್ಲಿ ಸಮಾಜದಲ್ಲಿ ವಾಸ್ತವ ಸ್ಥಿತಿಗತಿಗಳನ್ನು ಪ್ರತಿಪಾದಿಸಿ ಸಮಾಜದ ಪರಿವರ್ತನೆಯನ್ನು ಮಾಡಿದ್ದರು.
ಅವರ ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದ ಅವರು ಕುರುಬ ಸಮಾಜದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನಾನು ಸದಾಕಾಲ ಸಹಕಾರ ನೀಡುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಮೃತ್ ಅತ್ರೆಶ್, ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾರಾಯಣ ಗೌಡ, ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನಸಿದ್ದಯ್ಯ, ತಾಲ್ಲೂಕು ಕುರುಬರಸಂಘದ ಮಾಜಿ ಅಧ್ಯಕ್ಷ ಚಿಕ್ಕನಾಗಯ್ಯ, ಉಪಾಧ್ಯಕ್ಷವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಬಿ. ಡಿ.ಗಂಗರಾಜು, ಖಜಾಂಚಿ ಲಕ್ಷ್ಮಯ್ಯ, ನಿರ್ದೇ ಶಕರುಗಳಾದ ಕೆ. ನಾಗರಾಜು, ಬೈಲಮೂರ್ತಿ, ಕೇಶವಮೂರ್ತಿ, ಕಾನಿಪ ಧ್ವನಿ ಜಿಲ್ಲಾಧ್ಯಕ್ಷ ಡಿ. ಸಿದ್ದರಾಜು, ಮಂಜುನಾಥ್, ವೀರನಾಗಯ್ಯ, ಬಿ. ಎಸ್. ಲೋಕೇಶ್, ಪವಿತ್ರ, ತ್ಯಾಗರಾಜು, ರಾಜೇಶ್ವರಿ, ಕಲ್ಯಾಣ ಕುಮಾರ್,ಶ್ಯಾಮಿಯಾನ ಬೆತ್ತಿನಕೆರೆ ಮುನಿರಾಜು, ಇ. ಒ. ಲಷ್ಮಿನಾರಾಯಣಸ್ವಾಮಿ, ಬಿಇಒ ರಮೇಶ್, ಸಿಡಿಪಿಒ ನಾಗೇಶ್, ಶಿರಸ್ತೇದರ್ ರವೀಂದ್ರ, ನಗರ ಕಂದಾಯ ಕಾರ್ಯದರ್ಶಿ ಮಾರುತಿ, ರವಿಕುಮಾರ್, ಟಿ. ಎಪಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.