ಬೆಂಗಳೂರಿನ ವಿಜಯನಗರದಲ್ಲಿ ದಾಸಶ್ರೇಷ್ಠ ಶ್ರೀ ಕನಕ ಜಯಂತ್ಯೋತ್ಸವದಲ್ಲಿ ಮಾಜಿ ಸಚಿವ ಎಂ.ಕೃಷ್ಣಪ್ಪ, ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಕಿ ಚೌಧರಿ, ಡಾಟಟ ರಾಜುರವರು, ಶಾಂತಕುಮಾರಿ, ಟಿ.ಬಿ.ಬಳಗಾವಿರವರು ಅಧ್ಯಕರಾದ ಹೆಚ್. ಗಂಗಯ್ಯ್ ಗಣ್ಯರಿಂದ ಕನಕದಾಸರ ಪುತ್ತಳಿಗೆ ಪುಷ್ಪನಮನ ಸಲ್ಲಿಸಿದರು.
ಮಾಜಿ ಪಾಲಿಕೆ ಸದಸ್ಯರಾದ ಡಾ. ರಾಜು ಮಾತನಾಡಿ, ಜಾತ್ಯತೀತ ಸಿದ್ದಾಂತ ,ಭಕ್ತಿ ಪಂಥ ಮಾರ್ಗ ಹಾಗೂ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ ಕನಕದಾಸರು. ಕನಕದಾಸರ ಭಕ್ತಿಗೆ ಶ್ರೀ ಕೃಷ್ಣನೆ ಒಲಿದನು ಎಂದು ಉಲ್ಲೇಖವಿದೆ. ಕನಕದಾಸರ ಹೆಸರನ್ನು ಚಿರಸ್ಥಾಯಿ ಉಳಿಸಲು ಮತ್ತು ಮುಂದಿನ ಜನಾಂಗಕ್ಕೆ ಸ್ಮರಣೆಯ ಮಾಡಲು ದಾಸರ ಸಾಧನೆ ಸಮಾಜಕ್ಕೆ ತಿಳಿಸಬೇಕು.
ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ; ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ. ವಿದ್ಯಾಭ್ಯಾಸದಿಂದ ಸಾಧನೆಮಾಡಿ ನಮ್ಮ ಜನಾಂಗದ ಮಹಿಳಾ ಅಧ್ಯಕ್ಷ ನಾಗಲಕ್ಷ್ಮಿ ಚೌದರಿ, ಮತ್ತು ಮಾಜಿ ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾಗಿ ಹೆಸರುವಾಸಿಯಾಗಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ನೀಡಲಾಯಿತು.