ಮಳವಳ್ಳಿ: ಕನಕದಾಸರು 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು. ಇಂತಹ ಮಹನೀಯರ ಜಯಂತಿ ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಪುರಸಭೆ ಅಧ್ಯಕ್ಷರಾದ ಪುಟ್ಟಸ್ವಾಮಿ ರವರು ಪುರಸಭೆ ಆವರಣದಲ್ಲಿ ಕನಕ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪುರಸಭೆಯ ಸದಸ್ಯರಾದ ನಂದಕುಮಾರ್ ಮಾತನಾಡಿ, ಕನಕದಾಸರು ಬರಿ ಒಂದು ಜಾತಿಗೇ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15 – 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಅವರ ಆದರ್ಶಗಳು ಆದರ್ಶಗಳನ್ನು ಪ್ರತಿವರು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ನಗರತನಮ್ಮ ಪುರಸಭೆ ಉಪಾಧ್ಯಕ್ಷರಾದ ಜೈ ಸಿಂಹ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣ ಸದಸ್ಯರಾದ ನಾಗೇಶ್ ಭಾಗ್ಯಮ್ಮ ಅಂಕನಾಥ್ ಪುರಸಭೆ, ನಾಮಿನಿ ಸದಸ್ಯರಾದ ಪೇಟೆ ಬೀದಿ ಬಸವರಾಜು ಹಲವರು ಪಾಲ್ಗೊಂಡಿದ್ದರು.