ಚಂದಾಪುರ: ಕನ್ನಡ ಎಂಬುದು ಹೃದಯದ ಭಾಷೆ,ಅಮ್ಮನು ಹಚ್ಚಿದ ಹಣತೆಯಂತೆ ಮಕ್ಕಳ ಬಾಳಿನಲ್ಲಿ ಸದಾ ಪ್ರಜ್ವಲಿಸಬೇಕು ಎಂಬುದಾಗಿ ಖ್ಯಾತ ಹಿರಿಯ ಲೇಖಕಿ ಹಾಗೂ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷಿ÷್ಮ ಬಾಳೇಕುಂದ್ರಿ ಆಶಯ ವ್ಯಕ್ತಪಡಿಸಿದ್ದರು.
ಅವರು ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಸನ್ ಸೇರಾ ಕಂಪನಿ ಆವರಣದಲ್ಲಿ ಸನ್ಸೆರಾ ಕಾರ್ಮಿಕ ಬಳಗದ ವತಿಯಿಂದ ಏರ್ಪಡಿಸಿದ್ದ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಬದುಕಿನ ಸುಮಧುರ ಸಂಬಂಧಗಳು ಹೆಸರುಗಳು ಅ ಎಂಬ ಕನ್ನಡದ ಮೊದಲ ಅಕ್ಷರದಿಂದ ಹುಟ್ಟಿಕೊಳ್ಳುತ್ತವೆ ಅಮ್ಮ.ಅಪ್ಪಾ,ಅಕ್ಕ,ಅಣ್ಣಾ,ಅಜ್ಜ,ಅಜ್ಜಿ ಹೀಗೇ ಕನ್ನಡ ಎಂಬುದು ನಮ್ಮ ಜೀವಕೋಶದೊಳಗೆ ಭಾವಕೋಶವಾಗಿದೆ ಇಂತಹ ಅದ್ಭುತವಾದ ಕನ್ನಡ ಭಾಷೆಯನ್ನು ಪ್ರಾರಂಭದಲ್ಲಿ ಮಕ್ಕಳಿಗೆ ಸರಿಯಾಗಿ ಕಲಿಸಿಕೊಡದೇ ಇಂದಿನ ತಂದೇತಾಯಿಗಳೇ ಹಾಳುಮಾಡುತ್ತಿದ್ದಾರೆ ಮ್ಮಮಿಡ್ಯಾಡಿ ಅಂಟಿ ಅಂಕಲ್ ಸಂಸ್ಕöತಿಯಿಂದ ನಮ್ಮ ಕನ್ನಡತನವನ್ನು ನಾವು ನಮ್ಮ ಮಕ್ಕಳಿಂದ ದೂರಮಾಡುತ್ತಿದ್ದಿವಿ ಇದು ಮುಂದಿನ ಪೀಳಿಗೆ ನಾವು ಮಾಡುತ್ತಿರುವ ದುರಂತದ ಸಂಗತಿಯಾಗಿದೆ ಎಂಬುದಾಗಿ ವಿಷಾದ ವ್ಯಕ್ತಪಡಿಸಿದರು. ಇನ್ನು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಸೆರಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಪಿ.ಆರ್.ಸುರೇಶ್, ದ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸನ್ಸೇರಾ ಕಂಪನಿಯ ಕಾರ್ಮಿಕ ಮುಖಂಡ ಹೆನ್ನಾಗರ ಮಂಜುನಾಥ್ ಮಾತನಾಡಿ ಸನ್ ಸೇರಾ ಕಂಪನಿಯಲ್ಲಿ ಕಳೆದ ೨೦ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಮಾಡುತ್ತಿದ್ದಿವಿ ಇದರೊಂದಿಗೆ ರಕ್ತದಾನ ಶಿಭಿರ. ಗಿಡ ನೆಡುವ ಕಾರ್ಯಕ್ರಮ. ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪೋತ್ಸಾಹ ಧನ ವಿತರಣೆ, ಸಾದಕರಿಗೆ ಸನ್ಮಾನ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಠು ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು, ಸಾದಕರಿಗೆ ಸನ್ಮಾನ ಹಾಗೆಯೇ ಮನರಂಜನೆ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕöತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಪ್ರಕಾಶ್. ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಸಂಪತ್, ಮನೋಹರ್, ಮಧು, ರಂಗಸ್ವಾಮಿ, ಹಾಗೂ ಕಾರ್ಮಿಕ ಮುಖಂಡರಾದ ಮಂಜುನಾಥ್, ಪದ್ಮನಾಭ, ಹರಿಗೋಪಾಲ್, ಪ್ರದೀಪ್, ಹಾಗೂ ಸನ್ ಸೇರಾ ಕಂಪನಿಯ ಎಲ್ಲಾ ಘಟಕದ ಕಾರ್ಮಿಕ ಮುಖಂಡರು ಹಾಜರಿದ್ದರು.