69ನೇ ಕನ್ನಡ ರಾಜ್ಯೋತ್ಸವವು ನಮ್ಮ ಗ್ಲೋಬಲ್ ಅಕಾಡೆಮಿ ಫಾರ್ ಲರ್ನಿಂಗ್ ಶಾಲೆಯಲ್ಲಿ ದಿನಾಂಕ :16/11/2024 ರಂದು ಶನಿವಾರ ವಿಜೃಂಭಣೆಯಿಂದ ಜರುಗಿತು. ‘ಆಡು ಮುಟ್ಟದ ಸೊಪ್ಪಿಲ್ಲ ಕರ್ನಾಟಕದಲ್ಲಿ ಇಲ್ಲದ ಕಲೆ ಇಲ್ಲ’ ಎಂಬಂತೆ ಕರ್ನಾಟಕದ ಎಲ್ಲಾ ಕಲೆಗಳ ಆಗರವೇ ತುಂಬಿದ್ದ ‘ವಸ್ತು ಪ್ರದರ್ಶನ’ ನೋಡುಗರ ಗಮನಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯಪ್ರಕಾಶ್ ರವರು, ಮುಖ್ಯ ಅತಿಥಿಗಳಾದ ಗಾನಗಂಧರ್ವ ಶಶಿಧರ್ ಕೋಟೆ ಮತ್ತು ಗೌರ ವಾನ್ವಿತ ಅತಿಥಿ ಡಾ.ಗುಣವಂತ ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕರಾದ ಮಧುಸೂಧನ್ ರವರು, ಕಾರ್ಯದರ್ಶಿಗಳಾದ ನವೀನ್ ಪ್ರಕಾಶ್ ಮತ್ತು ಪ್ರಾಂಶುಪಾಲರಾದ ರೂಪ ಕರುಣಾಕರ್ ಭಾಗಿಯಾಗಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಕಾರ್ಯಕ್ರಮವು ಉದ್ಘಾಟನೆಯೊಂದಿಗೆ ಪ್ರಾರಂಭವಾಗಿ ವಿವಿಧ ಕರ್ನಾಟಕದ ಕಲೆಗಳನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊನೆಗೊಂಡು ನಂತರ ಉದ್ಘಾಟನೆಗೊಂಡ ವಸ್ತು ಪ್ರದರ್ಶನ (ಕನ್ನಡ ಕಲಾ ಸೌರಭ) ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನುತಂದುಕೊಟ್ಟಿತು. ಅತಿಥಿಗಳು ಕಾರ್ಯಕ್ರಮದ ಅಂಗವಾಗಿದ್ದ ವಸ್ತು ಪ್ರದರ್ಶನದ ಪ್ರತಿಯೊಂದು ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಾರ್ಯಕ್ಕೆ ಪ್ರಶಂಸೆ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.