ದೇವನಹಳ್ಳಿ: ನಾಡಿನ ಹೆಸರಾಂತ ಕವಿಗಳಾದ ಕುವೆಂಪು, ದಾ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಇನ್ನೂ ಮುಂತಾದವರ ರಚನೆಯ ಕವನಗಳಲ್ಲಿನ ತತ್ವಗಳನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಎನ್.ಕೃಷ್ಣಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ದೇವನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ನಮ್ಮ ದೇಸಿ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ಲಾವಣಿ, ತತ್ವಪದಗಳು ಜನರ ಜೀವನಕ್ಕೆ ಹತ್ತಿರವಾಗಿವೆ.
ಆದ್ದರಿಂದ ಯುವಜನತೆ ಇತ್ತ ಗಮನ ಹರಿಸಬೇಕಿದೆ ಎಂದು ಹೇಳಿದರು.ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ನಂಜಪ್ಪಮಾತನಾಡಿ ಇಂದಿನ ದಿನಗಳಲ್ಲಿ ಗಾಯನ, ನೃತ್ಯ, ಇತ್ಯಾದಿ ಸ್ಪರ್ಧೆಗಳನ್ನು ಮಾಡುವವರೆ ಕಮ್ಮಿಯಾಗಿದೆ, ಹಲವು ವರ್ಷಗಳಿಂದ ಗ್ರಾಮಾಂತರ ವಿದ್ಯಾರ್ಥಿಗಳಿಗೆ ದೇವನಹಳ್ಳಿಯ ಸರಸ್ವತಿ ಸಂಗೀತ ವಿದ್ಯಾಲಯ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ, ಇದರೊಂದಿಗೆ ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಪ್ರಶಸ್ತಿ-ಬಹುಮಾನಗಳನ್ನು ನೀಡುವುದರಿಂದ ಗ್ರಾಮಾಂತರ ಮಟ್ಟದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಹೊರಹಾಕಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗಾಯನ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ಸ್ಪರ್ಧಾ ವಿಜೇತರ ಪಟ್ಟಿ: ಪ್ರಥಮ ಪಿಯುಸಿ: ಲೋಕೇಶ್ವರಿ ಎಂ.-ಪ್ರಥಮ, ನಿಂಗಮ್ಮ-ದ್ವಿತೀಯ, ದಾನೇಶ್ವರಿ-ತೃತೀಯ, ದ್ವಿತೀಯ ಪಿಯುಸಿ : ಸಿದ್ಧಮ್ಮ -ಪ್ರಥಮ, ಕೀರ್ತಿ ಆರ್-ದ್ವಿತೀಯ, ಭಾರ್ಗವಿ -ತೃತೀಯಪ್ರಶಸ್ತಿ ಮತ್ತು ಬಹುಮಾನಗಳನ್ನು ಪಡೆದಿದ್ದಾರೆ.ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರುದ್ರಮುನಿ ಎಂ.ಎಸ್, ದೀಪಕ್, ಶಿವಮೂರ್ತಿ ಕೆ.ಜೆ, ಚಂದ್ರಶೇಖರ್ ಎನ್, ಮಧುಸೂಧನ್, ಶಶಿಕುಮಾರ್, ಚಂದ್ರಶೇಖರ್ ಯು.ಜಿ, ಪುರುಷೋತ್ತಮ್ ಜೆ, ಮುಕ್ತಾಂಬಿಕಾ ಬಿ, ಕುಮದಾ ವಿದ್ಯಾರ್ಥಿ ವೃಂದ, ಸರಸ್ವತಿ ಸಂಗೀತ ವಿದ್ಯಾಲಯ ಅಧ್ಯಕ್ಷೆ ಕಲ್ಪನಾ ವಿಶ್ವನಾಥ್, ಕಾರ್ಯದರ್ಶಿ ಮಂಜುನಾಥ ಜಿ, ಖಜಾಂಚಿ ನೇತ್ರಾವತಿ ಜಿ ಉಪಸ್ಥಿತರಿದ್ದರು.