ಬೆಂಗಳೂರು: ನಟ ಶಂಕರನಾಗ್ ಜಮ್ಮದಿನಾಚರಣೆ ಹಾಗೂ ೩೭ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಿಂಹ ಸ್ವಪ್ನ ಕನ್ನಡಿಗರ ಬಳಗ ಅಧ್ಯಕ್ಷ ಜೈ ಕುಮಾರ್ ನೇತೃತ್ವದಲ್ಲಿ , ಬೆಂಗಳೂರಿನ ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಬಡಮಕ್ಕಳಿಗೆ ಪುಸ್ತಕ ವಿತರಣೆ, ರಕ್ತದಾನ ಶಿಬಿರ, ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಎ. ರವಿಸುಬ್ರಮಣ್ಯ, ಸಮಾಜ ಸೇವಕರು ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷರಾದ ಎಂ. ಜಿ. ಆರ್. ಮಣಿ. ಪ್ರಶಾಂತ್ ಆಸ್ಪತ್ರೆ ಮಾಲೀಕರಾದ ಎಸ್. ಎನ್. ಮೋಹನ್ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಶಂಕರನಾಗ್ ಅವರ ೭೦ನೇ ಹುಟ್ಟುಹಬ್ಬ ಮತ್ತು ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ
